Thursday, 12th December 2024

ಮದ್ಯಮಾರಾಟಕ್ಕೆ ತೆಲಂಗಾಣ ಪೊಲೀಸರ 48 ಗಂಟೆ ನಿರ್ಬಂಧ

ತೆಲಂಗಾಣ : ಹೋಳಿ ಹಬ್ಬದ ಸಂದರ್ಭದಲ್ಲಿ ಮದ್ಯಮಾರಾಟಕ್ಕೆ ತೆಲಂಗಾಣ ಪೊಲೀಸರು ನಿರ್ಬಂಧಗಳನ್ನು ವಿಧಿಸಿದ್ದಾರೆ.

ಅವಳಿ ನಗರದಲ್ಲಿ 48 ಗಂಟೆಗಳ ಕಾಲ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಳಿ ಸಮಯದಲ್ಲಿ ಮಾರ್ಚ್ 19ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯದಂಗಡಿಗಳು, ಬಾರ್‌ಗಳು ಮತ್ತು ಕ್ಲಬ್‌ಗಳನ್ನು ಮುಚ್ಚಲು ಅಧಿಕಾರಿಗಳು ಆದೇಶಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಲಾಗಿದೆ. ಸಂಬಂಧವೇ ಇಲ್ಲದ ಜನರಿಗೆ ಬಣ್ಣ ಹಚ್ಚಬಾರದು, ನಿಯಮಗಳನ್ನು ಉಲ್ಲಂಘಿಸಿದರೆ, ಪೊಲೀಸರು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಈ ನಿರ್ಬಂಧಗಳು ಮೂರು ಪೊಲೀಸ್ ಕಮಿಷನರೇಟ್ ಗಳಲ್ಲಿ ಜಾರಿಯಲ್ಲಿರು ತ್ತವೆ. ಗುರುವಾರ ಸಂಜೆ 06 ರಿಂದ ಶನಿವಾರ ಬೆಳಿಗ್ಗೆ 06 ರವರೆಗೆ ನಿರ್ಬಂಧಗಳು ಜಾರಿಯಲ್ಲಿರು ತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.