Friday, 22nd November 2024

Liquor Consumers: ಎಣ್ಣೆ ಹೊಡೆಯುವುದರಲ್ಲಿ ತೆಲಂಗಾಣದ ಜನ ನಂ.1; ಕರ್ನಾಟಕಕ್ಕೆ ಯಾವ ಸ್ಥಾನ?

Liquor Consumers

ಸಾಮಾನ್ಯವಾಗಿ ಎಲ್ಲ ಮದ್ಯದ ಅಂಗಡಿಗಳಲ್ಲಿ (Liquor shops) ಬೆಳಗ್ಗಿನಿಂದಲೇ ಸರತಿ ಸಾಲುಗಳನ್ನು ನೋಡಿ ಬಹುಶಃ ನಮ್ಮ ರಾಜ್ಯದಲ್ಲೇ ಅತ್ಯಧಿಕ ಮದ್ಯ ಪ್ರಿಯರು (Liquor Consumers) ಇರಬಹುದು ಎಂಬುದನ್ನು ನಮ್ಮ ರಾಜ್ಯದ ಯಾರಾದರೂ ಊಹಿಸಿಕೊಂಡರೆ ಅದು ತಪ್ಪು. ಯಾಕೆಂದರೆ ದೇಶದ ಬೇರೆ ರಾಜ್ಯಗಳಲ್ಲಿ ನಮಗಿಂತಲೂ ಹೆಚ್ಚು ಮದ್ಯ ಪ್ರಿಯರು ಇರುವುದಾಗಿ ಸ್ವಾಯತ್ತ ಸಂಶೋಧನಾ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ (NIPFP) ಅಧ್ಯಯನ ತಿಳಿಸಿದೆ.

ಎನ್‌ಐಪಿಎಫ್‌ಪಿ ಅಧ್ಯಯನದ ಪ್ರಕಾರ ಕರ್ನಾಟಕ ಸಮೀಪದ ಎರಡು ತೆಲುಗು ರಾಜ್ಯಗಳಾದ ತೆಲಂಗಾಣ (telangana) ಮತ್ತು ಆಂಧ್ರಪ್ರದೇಶ ದಲ್ಲಿ (andrapradesh) ಅತಿ ಹೆಚ್ಚು ಮದ್ಯಪ್ರಿಯರು ಇರುವುದಾಗಿ ಹೇಳಿದೆ. ಯಾಕೆಂದರೆ ಅಲ್ಲಿನ ಕುಟುಂಬಗಳು ದೇಶಾದ್ಯಂತ ಅತಿ ಹೆಚ್ಚು ಮದ್ಯ ಬಳಕೆಯ ಸರಾಸರಿ ವಾರ್ಷಿಕ ವೆಚ್ಚವನ್ನು ಹೊಂದಿರುವುದನ್ನು ತೋರಿಸಿವೆ. ಇನ್ನು ಹೆಚ್ಚಿನ ಮದ್ಯಪ್ರಿಯರನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕ ಮತ್ತು ಕೇರಳ ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಮದ್ಯಕ್ಕಾ ಗಿ ವಾರ್ಷಿಕ ತಲಾ ಆದಾಯದ ಸರಾಸರಿ 374 ರೂ. ಖರ್ಚು ಮಾಡಿದರೆ ಕೇರಳದಲ್ಲಿ 379 ರೂ. ಖರ್ಚು ಮಾಡಲಾಗುತ್ತದೆ.

ಎನ್‌ಐಪಿಎಫ್‌ಪಿ ಪ್ರಕಾರ 2022-23ರಲ್ಲಿ ಮದ್ಯಕ್ಕಾಗಿ ತೆಲಂಗಾಣ, ಆಂಧ್ರ ಪ್ರದೇಶ ಕ್ರಮವಾಗಿ ವಾರ್ಷಿಕ ತಲಾ ಆದಾಯದ ಸರಾಸರಿ 1,623 ರೂ., ಮತ್ತು 1,306 ರೂ. ಖರ್ಚು ಮಾಡುವ ಮೂಲಕ ದೇಶದಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಪಂಜಾಬ್ 1,245 ರೂ., ಛತ್ತೀಸ್ ಗಡ 1,227 ರೂ., ಒಡಿಶಾ 1,156 ರೂ. ಖರ್ಚು ಮಾಡುವ ಮೂಲಕ ಅನಂತರದ ಸ್ಥಾನದಲ್ಲಿವೆ.

ತೆಲಂಗಾಣದಲ್ಲಿ 2022- 23ರ ಸಾಲಿನಲ್ಲಿ 1,623 ರೂ. ಅತಿ ಹೆಚ್ಚು ಸರಾಸರಿ ವಾರ್ಷಿಕ ತಲಾ ಬಳಕೆಯನ್ನು ಖರ್ಚು ಮಾಡಿರುವುದನ್ನು ಸೂಚಿಸಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಮದ್ಯಪ್ರಿಯರನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ.

ದೇಶದಲ್ಲಿ ಮದ್ಯಕ್ಕಾಗಿ ಕಡಿಮೆ ವೆಚ್ಚವನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಇಲ್ಲಿ ವಾರ್ಷಿಕ ತಲಾ ಆದಾಯದ ಸರಾಸರಿ 75 ರಿಂದ 49 ರೂ. ಖರ್ಚು ಮಾಡಲಾಗುತ್ತದೆ.

ಎನ್ಎಸ್ಎಸ್ಒ ಸಮೀಕ್ಷೆಯ ಮಾಹಿತಿಯ ಪ್ರಕಾರ, ಹೆಚ್ಚಿನ ವೆಚ್ಚದ ಇತರ ಪ್ರಮುಖ ರಾಜ್ಯಗಳಲ್ಲಿ ಕೇರಳ 486 ರೂ., ಹಿಮಾಚಲ ಪ್ರದೇಶ ರೂ. 457, ಪಂಜಾಬ್ 453 ರೂ., ತಮಿಳುನಾಡು 330 ರೂ. ಮತ್ತು ರಾಜಸ್ಥಾನ 308 ರೂ.ಗಳಾಗಿವೆ.

ಸಿಎಂಐಇ ದತ್ತಾಂಶದ ಆಧಾರದ ಮೇಲೆ 2022-23 ರ ಪ್ರಸ್ತುತ ಬೆಲೆಗಳಲ್ಲಿ ಹೆಚ್ಚಿನ ಸರಾಸರಿ ವಾರ್ಷಿಕ ತಲಾ ಬಳಕೆಯ ವೆಚ್ಚವನ್ನು ಹೊಂದಿರುವ ಇತರ ರಾಜ್ಯಗಳು ಆಂಧ್ರ ಪ್ರದೇಶವನ್ನು 1,306 ರೂ., ಛತ್ತೀಸ್‌ಗಢ 1,227 ರೂ., ಪಂಜಾಬ್ 1,245 ರೂ. ಮತ್ತು ಒಡಿಶಾ 1,156 ರೂ. ಗಳಾಗಿವೆ.

ತೆರಿಗೆ ಸಂಗ್ರಹ

ಮದ್ಯ ಬಳಕೆಯಲ್ಲಿ ಕಡಿಮೆ ತೆರಿಗೆ ಸಂಗ್ರಹಿಸುವ ರಾಜ್ಯ ಜಾರ್ಖಂಡ್ ಶೇ. 67 ಮತ್ತು ಅತಿ ಹೆಚ್ಚು ಗೋವಾ ಶೇ. 72 ಆಗಿದೆ.

HSRP Number Plate: ಈ ದಿನದೊಳಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಭಾರಿ ದಂಡ ಖಚಿತ!

ಹಳ್ಳಿಗಳಲ್ಲೇ ಹೆಚ್ಚು ಮದ್ಯಪ್ರಿಯರು

ಆಂಧ್ರಪ್ರದೇಶ, ಬಿಹಾರ, ಗೋವಾ, ಜಾರ್ಖಂಡ್, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ತಮಿಳುನಾಡು ಮತ್ತು ತ್ರಿಪುರದಂತಹ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ ಹೆಚ್ಚು ಮದ್ಯಕ್ಕಾಗಿ ಜನರು ಖರ್ಚು ಮಾಡುತ್ತಾರೆ.

ಅಸ್ಸಾಂ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಹರಿಯಾಣ, ಒಡಿಶಾ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ನಗರ ಪ್ರದೇಶಗಳಾದ್ಯಂತ ಹೆಚ್ಚಿನ ವೆಚ್ಚವನ್ನು ಮಾಡಲಾಗುತ್ತಿದೆ.