ಜಸ್ಟೀಸ್ ಸಿದ್ಧಾರ್ಥ್ ಅವರ ನೇತೃತ್ವದ ಪೀಠವು, ಲಿವ್-ಇನ್ ರಿಲೇಷನ್‌ಶಿಪ್ ಮುರಿದುಬಿದ್ದ ನಂತರ ಮಹಿಳೆ ಒಂಟಿಯಾಗಿ ಬದುಕುವುದು ಕಷ್ಟ. ಭಾರತೀಯ ಸಮಾಜವು ಅಂತಹ ಸಂಬಂಧಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಮಹಿಳೆಗೆ ಪ್ರಸ್ತುತ ಪ್ರಕರಣದಂತೆ ತನ್ನ ಲೈವ್-ಇನ್ ಪಾಲುದಾರರ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ ಎಂದು ಹೇಳಿತು.
ಭಾರತೀಯ ದಂಡಸಂಹಿತೆಯಡಿ ಮಹಿಳೆಯೊಬ್ಬರು ಸುಳ್ಳು ಮದುವೆ ಭರವಸೆ ಮತ್ತು ಅತ್ಯಾಚಾರ ಕೇಸ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಆರೋಪಿಯು ಒಂದೂವರೆ ವರ್ಷದಿಂದ ತನ್ನ ಜತೆ ಲಿವ್ ಇನ್ ಸಂಬಂಧದಲ್ಲಿದ್ದ. ಇದರಿಂದ ಗರ್ಭಿಣಿಯಾಗಿದ್ದೆ. ಆ ಬಳಿಕ ಅಥವಾ ಆರೋಪಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಸಂತ್ರಸ್ತೆಗೆ ಈ ಮೊದಲೇ ವಿವಾಹವಾಗಿದ್ದು, ಎರಡು ಮಕ್ಕಳು ಕೂಡ ಇವೆ. ಆದರೆ, ಆರೋಪಿಯು ತಮ್ಮಿಬ್ಬರ ಖಾಸಗಿ ಫೋಟೋಗಳನ್ನು ಮೊದ ಲನೇ ಗಂಡನಿಗೆ ಕಳುಹಿಸಿದ್ದರಿಂದ ಆತ ತನ್ನನ್ನು ತ್ಯಜಿಸಿದ್ದಾನೆ ಎಂದು ಆಕೆ ತನ್ನ ವಾದದಲ್ಲಿ ತಿಳಿಸಿದ್ದಾಳೆ.