Sunday, 15th December 2024

ಈ ರಾಜ್ಯದಲ್ಲಿ ಲಾಕ್‌ಡೌನ್‌ ಜುಲೈ 15 ರವರೆಗೆ ವಿಸ್ತರಣೆ ?

ಕೊಲ್ಕತ್ತಾ: ಕರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಲಾಕ್‌ಡೌನ್‌ ಅನ್ನು ಜುಲೈ 15 ರವರೆಗೆ ವಿಸ್ತರಿಸಿತು.

ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ 1,836 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. 2,022 ಚೇತರಿಕೆ ಕಂಡಿದ್ದು ಒಟ್ಟು ಚೇತರಿಕೆ 14,55,453 ಕ್ಕೆ ಏರಿದೆ. ಪ್ರಸ್ತುತ, ಪಶ್ಚಿಮ ಬಂಗಾಳದಲ್ಲಿ 21,884 ಸಕ್ರಿಯ ಪ್ರಕರಣಗಳಿವೆ.

ಪ್ರಸ್ತುತ ದೇಶದಲ್ಲಿ ಕರೋನಾ ಪ್ರಮಾಣ ಕಡಿಮೆಯಾಗುತ್ತಿದ್ದು ಹಲವು ರಾಜ್ಯಗಳು ಲಾಕ್ ಡೌನ್ ನ್ನು ಸಡಿಲಿಸುತ್ತಾ ಬಂದರೆ, ಕೆಲವು ರಾಜ್ಯಗಳು ಸ್ವಲ್ಪ ಸಡಿಲಿಕೆ ಯೊಂದಿಗೆ ಲಾಕ್ ಡೌನ್ ವಿಸ್ತರಿಸಿವೆ. ದೇಶದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ದಿನಕ್ಕೆ 50 ಸಾವಿರಕ್ಕಿಂತಲೂ ಕಡಿಮೆ ವರದಿಯಾಗುತ್ತಿವೆ‌. ಮೂರನೇ ಅಲೆ ಎದುರಿಸಲು ಸಿದ್ದವಾಗಿದ್ದೇವೆ ಎಂದು ಸರ್ಕಾರ ಹೇಳಿದೆ.