Sunday, 15th December 2024

ಲಾಕ್‌ಡೌನ್ ಭೀತಿ: 435 ಪಾಯಿಂಟ್ಸ್‌ ಕುಸಿತ ಕಂಡ ಸೆನ್ಸೆಕ್ಸ್

ಮುಂಬೈ: ಮುಂಬೈ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ 435 ಪಾಯಿಂಟ್ಸ್‌ ಕುಸಿದಿದ್ದು, ನಿಫ್ಟಿ 15 ಸಾವಿರ ಗಡಿಯಿಂದ ಕೆಳಗಿಳಿದಿದೆ. ಕೋವಿಡ್-19 ಎರಡನೇ ಸುತ್ತಿನ ಲಾಕ್‌ಡೌನ್ ಭೀತಿಯು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 434.93 ಪಾಯಿಂಟ್ಸ್‌ ರಷ್ಟು ಕುಸಿತಗೊಂಡು 50,889.76 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 137.20 ಪಾಯಿಂಟ್ಸ್ರಷ್ಟು ಇಳಿಕೆಗೊಂಡು 14,981.80 ಪಾಯಿಂಟ್ಸ್‌ ಮುಟ್ಟಿದೆ. 1,175 ಷೇರುಗಳು ಏರಿಕೆ ಗೊಂಡರೆ, 1,727 ಷೇರುಗಳು ಕುಸಿತ ಕಂಡಿದೆ.

ಟಾಟಾ ಸ್ಟೀಲ್, ಎಸ್‌ಬಿಐ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಯುಪಿಎಲ್, ಇಂಡಸ್‌ಇಂಡ್ ಬ್ಯಾಂಕ್, ಡಾ. ರೆಡ್ಡಿ ಲ್ಯಾಬ್ಸ್, ಗೇಲ್ ಮತ್ತು ಎಚ್‌ಯುಎಲ್ ಲಾಭ ಗಳಿಸಿವೆ.