ಕೋಲ್ಕತ್ತಾ: ಪಶ್ಚಿಮ ಬಂಗಾಳದ ಲಾಕ್ಡೌನ್ ಅವಧಿಯನ್ನ ಜೂನ್ 15ರವರೆಗೆ ವಿಸ್ತರಿಸಲಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಕರೋನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ನಿರ್ಧಾರ ಕೈಗೊಂಡಿದೆ.
ಮೇ 16 ರಿಂದ 30 ರವರೆಗೆ ಬಂಗಾಳದಲ್ಲಿ ಲಾಕ್ಡೌನ್ ವಿಧಿಸಲಾಗಿದ್ದು, ಸಧ್ಯ, ಅದನ್ನ ಜೂನ್ 15ರವರೆಗೆ ಹೆಚ್ಚಿಸಲಾಗಿದೆ. ಅಂದ ಹಾಗೆ, ಪಶ್ಚಿಮ ಬಂಗಾಳದಲ್ಲಿ ಒಂದು ದಿನದಲ್ಲಿ 16,225 ಹೊಸ ಕೋವಿಡ್ -19 ಪ್ರಕರಣಗಳು ಕಾಣಿಸಿಕೊಂಡ ನಂತರ, ರಾಜ್ಯ ದಲ್ಲಿ ಸೋಂಕಿತರ ಸಂಖ್ಯೆ 13,18,203 ಕ್ಕೆ ಏರಿಕೆಯಾಗಿದೆ.
ಇನ್ನು, ಉತ್ತರ ಪ್ರದೇಶವು ಮೇ 24ರಂದು 2.8 ಲಕ್ಷ ಮತ್ತು ಮೇ 25ರಂದು ಸುಮಾರು 2.7 ಲಕ್ಷ ಡೋಸ್ ಲಸಿಕೆಯನ್ನ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.