Thursday, 12th December 2024

ಲೋಕಸಭಾ ಚುನಾವಣೆ 2024ಕ್ಕೆ ಮುಹೂರ್ತ ಫಿಕ್ಸ್: 85 ವರ್ಷ ಮೇಲ್ಪಟ್ಟವರಿಗೂ ಮತದಾನಕ್ಕೆ ಅವಕಾಶ

ವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ 2024ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 85 ವರ್ಷ ಮೇಲ್ಪಟ್ಟವರಿಗೂ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ನಾವು ಲೋಕಸಭಾ ಚುನಾವಣೆ ಸಂಪೂರ್ಣ ತಯಾರಿ ನಡೆಸಲಾಗಿದೆ. ಚುನಾವಣೆ ಒಂದು ಯುದ್ಧವಿದ್ದಂತೆ. ಜಮ್ಮು ಕಾಶ್ಮೀರ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆ ಬಾಕಿಯಿದೆ. 800 ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಲೋಕಸಭಾ ಚುನಾವಣೆಗಾಗಿ ಚರ್ಚೆ ನಡೆಸಲಾಗಿದೆ. ಪೊಲೀಸ್, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೊಂದಿಗೂ ಸಮೀಕ್ಷೆ ನಡೆಸಿ, ಚರ್ಚಿಸಲಾಗಿದೆ ಎಂದರು.

ನಾವು ಸ್ವತಂತ್ರ್ಯ, ನಿಷ್ಪಕ್ಷ ಪಾತ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. 97 ಕೋಟಿ ಜನರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಾರೆ. 10.5 ಲಕ್ಷ ಪೋಲಿಂಗ್ ಭೂತ್ ಗಳನ್ನು ನಿರ್ಮಿಸಲಾಗುತ್ತಿದೆ. 1.5 ಕೋಟಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.

ಇನ್ನು 10.5 ಲಕ್ಷ ಮತಗಟ್ಟೆಗಳು, 55 ಲಕ್ಷ ಇವಿಎಂಗಳನ್ನ ಸಿದ್ದಪಡೆಸಲಾಗಿದೆ ಎಂದು ಹೇಳಿದರು. ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳನ್ನು ನಡೆಸುವುದು ನಮಗೆ ದೊಡ್ಡ ಸವಾಲಾಗಿದೆ ಎಂದರು.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, 2024ನೇ ಇಸವಿಯು ವಿಶ್ವದಲ್ಲಿ ಚುನಾವಣೆಗಳ ವರ್ಷವಾಗಲಿದೆ. ನಮ್ಮ ತಂಡ ಚುನಾವಣೆಗೆ ಸಂಪೂರ್ಣ ಸಜ್ಜಾಗಿದೆ. ಸಂಪೂರ್ಣ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ ಎಂಬ ವಿಶ್ವಾಸ ನಮಗಿದೆ ಎಂದರು.

“2024ರ ಚುನಾವಣೆಗೆ ದೇಶದಲ್ಲಿ 96.8 ಕೋಟಿ ಮತದಾರರಿದ್ದು, ಅದರಲ್ಲಿ ಪುರುಷ ಮತದಾರರ ಸಂಖ್ಯೆ 49.7 ಕೋಟಿ ಮತ್ತು ಮಹಿಳಾ ಮತದಾರರ ಸಂಖ್ಯೆ 47.1 ಕೋಟಿಗಿಂತ ಹೆಚ್ಚಾಗಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ 1.82 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ” ಎಂದು ತಿಳಿಸಿದರು.

ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನ ಮೊಬೈಲ್ ಆಯಪ್ ಮೂಲಕ ಗುರುತಿಸಬಹುದು ಎಂದು ಆಯುಕ್ತರು ಹೇಳಿದರು.

ಮತದಾನದ ದಿನಾಂಕಗಳು, ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯುವ ಹಂತಗಳು ಮತ್ತು ಫಲಿತಾಂಶಗಳ ಪ್ರಕಟಣೆಯಂತಹ ನಿರ್ಣಾಯಕ ವಿವರಗಳನ್ನು ಕುಮಾರ್ ಶೀಘ್ರದಲ್ಲಿ ಘೋಷಿಸಲಿದ್ದಾರೆ.

ಈ ನಡುವೆ ಅವರು “ನಮ್ಮಲ್ಲಿ 97 ಕೋಟಿ ನೋಂದಾಯಿತ ಮತದಾರರು, 10.5 ಲಕ್ಷ ಮತದಾನ ಕೇಂದ್ರಗಳು, 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ, 55 ಲಕ್ಷ ಇವಿಎಂಗಳು, 4 ಲಕ್ಷ ವಾಹನಗಳಿವೆ” ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

12 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಪ್ರಮಾಣ ಹೆಚ್ಚಾಗಿದೆ ಒಟ್ಟು 96.8 ಕೋಟಿ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.