Monday, 18th November 2024

Lotus Stem: ಕಮಲದ ಹೂವಿನ ದಂಟನ್ನು ಸೇವಿಸಿದರೆ ಸಾಕು; ಹಲವು ಆರೋಗ್ಯ ಸಮಸ್ಯೆಗಳು ಮಾಯ!

Lotus Stem

ಲಕ್ಷ್ಮಿದೇವಿಗೆ ಕಮಲದ ಹೂ ಎಂದರೆ ಬಹಳ ಇಷ್ಟ. ಹಾಗಾಗಿ ಕಮಲದ ಹೂವನ್ನು ಅರ್ಪಿಸಿ ಲಕ್ಷ್ಮಿದೇವಿಯ ಪೂಜೆ ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳುತ್ತಾರೆ. ಆದರೆ ಈ ಕಮಲದ ಹೂವಿನ ದಂಟಿನಲ್ಲಿ (Lotus Stem )ಹಲವಾರು ಆರೋಗ್ಯ ಗುಣಗಳಿವೆ.ಇದನ್ನು ಆಹಾರ ರೂಪದಲ್ಲಿ ಬಳಸಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತಾ? ತಿಳಿದಿಲ್ಲವಾದರೆ ಕಮಲದ ಹೂವಿನ ದಂಟಿನಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.  

Lotus Stem

ಕಮಲದ ಹೂವಿನ ಕಾಂಡದ ಆರೋಗ್ಯ ಪ್ರಯೋಜನಗಳು:

ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ: ತಜ್ಞರ ಪ್ರಕಾರ ಕಮಲದ ಹೂವಿನ ದಂಟನ್ನು ಅಡುಗೆಯಲ್ಲಿ ವಿವಿಧ ರೀತಿಯಲ್ಲಿ ಬಳಸಬಹುದು.ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಮಲವನ್ನು ಮೃದುಗೊಳಿಸುತ್ತದೆ, ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.

ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ:

ಕಮಲದ ಹೂವಿನ ಕಾಂಡದಲ್ಲಿ ಕಬ್ಬಿಣ ಮತ್ತು ತಾಮ್ರ ಸಮೃದ್ಧವಾಗಿದೆ. ರಕ್ತದ ಕೊರತೆ ಇರುವವರು ಖಂಡಿತವಾಗಿಯೂ ಕಮಲದ ಹೂವಿನ ದಂಟನ್ನು ಸೇವಿಸಿ. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ರಕ್ತಹೀನತೆಯ ರೋಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ  ಆಮ್ಲಜನಕವು ಅಂಗಗಳನ್ನು ಸರಿಯಾಗಿ ತಲುಪುತ್ತದೆ.

Lotus Stem

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:

ನಿಮಗೆ ಹೈಬಿಪಿ ಇದ್ದರೆ ಕಮಲದ ಹೂವಿನ ದಂಟನ್ನು ತಿನ್ನಬಹುದು. ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು:  

ಇದು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುತ್ತದೆ. ಇದು ಮೆದುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶ ಮನಸ್ಥಿತಿ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಿರಿಕಿರಿ, ತಲೆನೋವು ಮತ್ತು ಒತ್ತಡದ ಸಮಸ್ಯೆ ಕಾಡುವುದಿಲ್ಲ.

ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್ ಹೊಂದಿರುವ ವಿಶ್ವದ ಅತ್ಯಂತ ‘ಕಿರಿದಾದ ರಸ್ತೆ’ಯ ವಿಡಿಯೊ ಇದು!

ಕಮಲದ ಹೂವಿನ ದಂಟು ಬಳಸಿ ನಾನಾ ರೀತಿಯ ಅಡುಗೆಯನ್ನು ಮಾಡಬಹುದು. ಈಗ ಆನ್‌ಲೈನ್‌ನಲ್ಲಿಯೂ ಇದು ಸಿಗುತ್ತದೆ. ಇನ್ನು ಈ ದಂಟುಗಳನ್ನು ಬಳಸಿಕೊಂಡು ಸಾಂಬಾರು, ಸೂಪ್‌ ಮಾಡಬಹುದು. ಹಾಗೇ ಒಣಗಿರುವ ದಂಟಿನಿಂದಲೂ ನಾನಾ ಬಗೆಯ ಅಡುಗೆ ಮಾಡಿಕೊಂಡು ಸವಿಯಬಹುದು.