Thursday, 12th December 2024

ಇನ್ನು ಮುಂದೆ ನಿನ್ನ ಜತೆ ಸಂಬಂಧ ಬೇಡ ಎಂದ ಶಿಕ್ಷಕಿ: ವಿದ್ಯಾರ್ಥಿ ಆತ್ಮಹತ್ಯೆ

ಚೆನ್ನೈ: ಪ್ರೀತಿಸುತ್ತೇನೆ ಎಂದು ಹೇಳಿದ್ದ ಶಿಕ್ಷಕಿ ‘ಇನ್ನು ಮುಂದೆ ನಿನ್ನ ಜತೆ ಸಂಬಂಧ ಬೇಡ’ ಎಂದು ಹೇಳಿದ್ದಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳು ನಾಡಿನ ಚೆನ್ನೈನಿಂದ 20 ಕಿಮೀ ದೂರದಲ್ಲಿರುವ ಅಂಬತ್ತೂರ್​ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡು ತ್ತಿದ್ದರು.

ಹುಡುಗನಿಗೆ 10ನೇ ಕ್ಲಾಸ್​​ನಲ್ಲಿ ಇದ್ದಾಗಿನಿಂದಲೂ ಪಾಠ ಮಾಡುತ್ತಿದ್ದರು. ಹುಡುಗ ಎಷ್ಟೋ ಸಲ ಶಿಕ್ಷಕಿಯ ಮನೆಗೂ ಭೇಟಿ ನೀಡಿದ್ದ. ಅವರು ಬೋಧಿಸಿದ ವಿಷಯದಲ್ಲಿ ಅನುಮಾನ, ಗೊಂದಲವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು, ತನ್ನ ಉಳಿದ ಸ್ನೇಹಿತ ರೊಂದಿಗೆ ಶಿಕ್ಷಕಿ ಮನೆಗೆ ಹೋಗುತ್ತಿದ್ದ ಎನ್ನಲಾಗಿದೆ.

ಶಿಕ್ಷಕಿ ಚಿಕ್ಕವಯಸ್ಸಿನವರೇ ಆಗಿದ್ದರು. ಮದುವೆಯಾಗಿರಲಿಲ್ಲ. ಇವರಿಬ್ಬರ ಮಧ್ಯೆ ಸಂಬಂಧ ಏರ್ಪಟ್ಟಿತ್ತು. ಆದರೆ ಇತ್ತೀಚೆಗೆ ಶಿಕ್ಷಕಿಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು.

ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದು ತಿಂಗಳ ಹಿಂದೆ. ಅವನು ಮೃತಪಟ್ಟಾಗ ಕುಟುಂಬದವರು ಗೋಳಾಡಿದ್ದರು. ಆದರೆ ಅವನ ತಾಯಿಗೆ ಏನೋ ಅನುಮಾನ. ಹೀಗಾಗಿ ತನಿಖೆ ಮುಂದುವರಿಸಿದ ಪೊಲೀಸರು ಆತನ ಫೋನ್​​ಗಳನ್ನೆಲ್ಲ ಪರಿಶೀಲನೆ ಮಾಡಿದರು. ಆ ಹುಡುಗ ಮತ್ತು ಶಿಕ್ಷಕಿ ಒಟ್ಟಾಗಿರುವ ಫೋಟೋಗಳೆಲ್ಲ ಫೋನ್​​ನಲ್ಲಿ ಸಿಕ್ಕಿವೆ. ಹೀಗಾಗಿ ಶಿಕ್ಷಕಿಯನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೊಂದು ಅಪರೂಪದ ಪ್ರಕರಣ ಎಂದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿ ಎನ್​​ಜಿಒವೊಂದರ ಸಂಸ್ಥಾಪಕಿ ವಿದ್ಯಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.