Saturday, 14th December 2024

ಲವಪ್ರೀತ ತೂಫಾನ ಸಿಂಹ ಬಿಡುಗಡೆ

ಅಮೃತಸರ: ಅಜಾನಲ ಪೊಲೀಸ ಠಾಣೆಯ ಪೊಲೀಸರು `ವಾರಿಸ ಪಂಜಾಬ ದೆ’ (ಪಂಜಾ ಬಿನ ವಾರಸುದಾರ) ಈ ಖಲಿಸ್ತಾನಿ ಸಂಘಟನೆಯ ಮುಖಂಡ ಅಮೃತಪಾಲ ಸಿಂಹನ ಸಹಚರ ಲವಪ್ರೀತ ತೂಫಾನ ಸಿಂಹನನ್ನು ಬಿಡುಗಡೆಗೊಳಿಸಿತು.

ಫೆಬ್ರವರಿ 23 ರಂದು ಅವನ ಬಿಡುಗಡೆಗಾಗಿ ಸಾವಿರಾರು ಶಸ್ತ್ರ ಸಜ್ಜಿತ ಖಲಿಸ್ತಾನವಾದಿ ಸಿಖ್ಖರು ಈ ಪೊಲೀಸ ಠಾಣೆಗೆ ಘೇರಾವ್ ಹಾಕಿದ್ದರು.

ಅವರು ಒತ್ತಡ ಹೇರಿದ್ದರಿಂದಲೇ ಲವಪ್ರೀತ ತೂಫಾನ ಸಿಂಹನನ್ನು ಬಿಡುಗಡೆಗೊಳಿಸ ಲಾಯಿತು.

ಬಿಡುಗಡೆಯ ವಿಷಯದಲ್ಲಿ ಪೊಲೀಸ ಅಧೀಕ್ಷಕರು, ಲವಪ್ರೀತ ತೂಫಾನ ಸಿಂಹ ಈ ಅಪರಾಧದ ಸಮಯದಲ್ಲಿ ಉಪಸ್ಥಿತ ಇರಲಿಲ್ಲವೆಂದು ದಾಖಲೆಗಳನ್ನು ನೀಡಿದ್ದರಿಂದ ಅವನನ್ನು ಬಿಡುಗಡೆ ಮಾಡಲಾಯಿತು ಮತ್ತು ನಾವು ಈ ದಾಖಲೆಗಳನ್ನು ನ್ಯಾಯಾ ಲಯಕ್ಕೆ ಹಾಜರು ಪಡಿಸಿದ್ದೇವೆ ಎಂದು ಹೇಳಿದ್ದಾರೆ.