Friday, 22nd November 2024

LPG Price Hike: ದೀಪಾವಳಿ ಗ್ರಾಹಕರಿಗೆ ಕಹಿ ಗಿಫ್ಟ್‌, LPG ಸಿಲಿಂಡರ್ ಬೆಲೆಯಲ್ಲಿ 62 ರೂ. ಏರಿಕೆ

lpg price hike

ನವದೆಹಲಿ : ದೀಪಾವಳಿ (Deepavali 2024) ಹಬ್ಬದ ದಿನವೇ ಗ್ರಾಹಕರಿಗೆ ಶಾಕ್ ನೀಡಿರುವ ತೈಲ ಕಂಪನಿಗಳು, 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ (commercial cylinder) ಬೆಲೆಯನ್ನು 62 ರೂ.ಗಳಷ್ಟು (LPG Price Hike) ಹೆಚ್ಚಿಸಿವೆ. ತೈಲ ಕಂಪನಿಗಳು ಬಿಡುಗಡೆ ಮಾಡಿರುವ ಇತ್ತೀಚಿನ ದರಗಳ ಪ್ರಕಾರ, ಈ ಗ್ಯಾಸ್ ಸಿಲಿಂಡರ್‌ಗಳು ಈಗ ಜನರಿಗೆ 62 ರೂ.ಗಳಷ್ಟು ದುಬಾರಿಯಾಗಲಿವೆ.

ಆದರೆ, 14 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗದಿರುವುದು ಸಮಾಧಾನದ ಸಂಗತಿ. ಅದೇ ಸಮಯದಲ್ಲಿ, ತೈಲ ಕಂಪನಿಗಳು ಎಟಿಎಫ್ ಬೆಲೆಗಳನ್ನು ಹೆಚ್ಚಿಸಿವೆ, ಇದು ವಿಮಾನ ದರವೂ ದುಬಾರಿಯಾಗುತ್ತಿದೆ ಎಂದು ಸೂಚಿಸುತ್ತದೆ.

ವಾಣಿಜ್ಯ ಸಿಲಿಂಡರ್‌ನ ಇತ್ತೀಚಿನ ದರ ಎಷ್ಟು?

ಬೆಂಗಳೂರು- 805.50 ರೂ
ದೆಹಲಿ – 1802 ರೂ
ಕೋಲ್ಕತ್ತಾ – 1911.50 ರೂ
ಮುಂಬೈ – 1754.50 ರೂ
ಚೆನ್ನೈ – 1964.50 ರೂ

ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಇತ್ತೀಚಿನ ಸ್ಥಿತಿ ಏನು?

ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದ ನಂತರ, ತೈಲ ಕಂಪನಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಅಂದರೆ 14.2 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿಲ್ಲ.

ಬೆಂಗಳೂರು- 1,879.00 ರೂ
ದೆಹಲಿ – 803 ರೂ
ಕೋಲ್ಕತ್ತಾ – 829 ರೂ
ಮುಂಬೈ – 802.50 ರೂ
ಚೆನ್ನೈ – 818.50 ರೂ

ದೀಪಾವಳಿ ಸಮಯದಲ್ಲಿ ವಿಮಾನ ಪ್ರಯಾಣಿಕರಿಗೆ ದೊಡ್ಡ ಹೊಡೆತವನ್ನು ನೀಡುತ್ತಿರುವ ತೈಲ ಕಂಪನಿಗಳು ಜೆಟ್ ಇಂಧನ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಿಮಾನ ಟಿಕೆಟ್ ದುಬಾರಿಯಾಗಬಹುದು. ನವೆಂಬರ್ ಮೊದಲನೇ ತಾರೀಖಿನಿಂದ ತೈಲ ಕಂಪನಿಗಳು ಜೆಟ್ ಇಂಧನ ಅಂದರೆ ಎಟಿಎಫ್ ಬೆಲೆಯನ್ನು ಪ್ರತಿ ಕೆಜಿಗೆ ಸುಮಾರು 3 ಸಾವಿರ ರೂಪಾಯಿಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿವೆ.

ಮೆಟ್ರೋ ನಗರಗಳಲ್ಲಿ ಎಟಿಎಫ್ ಬೆಲೆ (ದೇಶೀಯ) ಇಲ್ಲಿದೆ:

ದೆಹಲಿ ರೂ 90,538.72
ಕೋಲ್ಕತ್ತಾ 93,392.79 ರೂ
ಮುಂಬೈ ರೂ 84,642.91
ಚೆನ್ನೈ ರೂ 93,957.10

ಇದನ್ನೂ ಓದಿ: 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 72 ರೂ. ಇಳಿಕೆ