Friday, 22nd November 2024

ದರೋಡೆಕೋರ ಸಂಬಂಧಿಯ ಮನೆ ಧ್ವಂಸ

ಕ್ನೋ: ಕೊಲೆ ಪ್ರಕರಣದ ಸಾಕ್ಷಿಯೊಬ್ಬರನ್ನು ಹತ್ಯೆಗೈದ ಐದು ದಿನಗಳ ಬಳಿಕ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿರುವ ದರೋಡೆಕೋರ ಅತಿಕ್ ಅಹ್ಮದ್ ಹತ್ತಿರದ ಸಂಬಂಧಿಯ ಮನೆಯನ್ನುಬುಲ್ಡೋಝರ್‌ ಮೂಲಕ ಧ್ವಂಸಗೊಳಿಸಲಾಗಿದೆ.

2005ರಲ್ಲಿ ರಾಜಕಾರಣಿ ರಾಜು ಪಾಲ್ ಕೊಲೆ ಪ್ರಕರಣದ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ನನ್ನು ಪ್ರಯಾಗ್‌ರಾಜ್‌ನಲ್ಲಿರುವ ಆತನ ಮನೆಯ ಹೊರಗೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಗಿತ್ತು. ಐವರು ನಡೆಸಿದ ಗುಂಡಿನ ದಾಳಿಯಲ್ಲಿ ಪಾಲ್ ಅವರ ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದ.

ಗ್ಯಾಂಗ್ ಸ್ಟರ್ -ರಾಜಕಾರಣಿ ಹಾಗೂ ಸಮಾಜವಾದಿ ಪಕ್ಷದ ಮಾಜಿ ನಾಯಕ ಅತಿಕ್ ಅಹ್ಮದ್ ಹತ್ಯೆಯನ್ನು ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿಕ್ ಅಹ್ಮದ್ ನ ಕಡು ಪ್ರತಿಸ್ಪರ್ಧಿಯಾಗಿದ್ದ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ ಹತ್ಯೆ ಯನ್ನು ಉಮೇಶ್ ಪಾಲ್ ಕಣ್ನಾರೆ ನೋಡಿದ್ದ. ಅಹಮದಾಬಾದ್‌ನ ಜೈಲಿನಲ್ಲಿರುವ ಅತಿಕ್ ಅಹ್ಮದ್ ಸಾಕ್ಷಿಯನ್ನು ಕೊಲ್ಲಲು ತನ್ನ ಹತ್ತಿರದ ಐದು ಅಥವಾ ಆರು ಸಹಚರರನ್ನು ಕಳುಹಿಸಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಪೊಲೀಸರು ಲಕ್ನೋದಲ್ಲಿರುವ ಅತಿಕ್ ಅಹ್ಮದ್ ಮನೆಯ ಮೇಲೆ ದಾಳಿ ನಡೆಸಿ ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ