Thursday, 12th December 2024

30 ರೂಪಾಯಿಗಾಗಿ ಮೂವರ ಜಗಳ: ವಿದ್ಯಾರ್ಥಿ ಹತ್ಯೆ

ಲಖನೌ: 30 ರೂಪಾಯಿಗಾಗಿ ಮೂವರ ನಡುವೆ ಉಂಟಾದ ಜಗಳ 17 ವರ್ಷದ ವಿದ್ಯಾರ್ಥಿ ಯ ಹತ್ಯೆಯೊಂದಿಗೆ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಗ್ರಾಮದಲ್ಲಿ ನಡೆದಿದೆ. ಬರೌತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಗಳು 11 ನೇ ತರಗತಿ ವಿದ್ಯಾರ್ಥಿಯ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಕೆಎಚ್ಆರ್ ಇಂಟರ್ ಕಾಲೇಜಿನ ವಿದ್ಯಾರ್ಥಿ ಹೃತಿಕ್ ಎಂದು ಗುರುತಿಸ ಲಾಗಿದೆ. 30 ರೂಪಾಯಿಗೆ ಜಗಳ ಉಂಟಾಗಿ ಕೊಲೆಯಾಗಿರುವುದು ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ ಎಂದು ಬರೌತ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
30 ರೂಪಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೃತ್ತಿಕ್ ಅದೇ ಗ್ರಾಮದ ಮೂವರೊಂದಿಗೆ ಜಗಳವಾಡಿದ್ದು, ಆರೋಪಿಗಳು ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಆರೋಪಿಗಳು ಹೃತಿಕ್ ಗೆ ಪರಿಚಿತರಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.