Thursday, 12th December 2024

ಸ್ಥಳೀಯ ಮುಸ್ಲಿಮರಿಂದಲೇ ಮದರಸಾ ನೆಲಸಮ..!

ಗುವಾಹಟಿ: ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಮದರಾಸದಲ್ಲಿ ಇಬ್ಬರು ಬಾಂಗ್ಲಾ ಉಗ್ರರಿಗೆ ಆಶ್ರಯ ನೀಡಿದ ಕಾರಣಕ್ಕಾಗಿ ಅಲ್ಲಿನ ಮುಸ್ಲಿಮರೇ ಮದರಸಾವನ್ನು ಧ್ವಂಸಗೊಳಿಸಿದ್ದಾರೆ.

ಜಲಾಲ್‍ವುದ್ದೀನ್ ಶೇಖ್ ಮದರಸಾದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಮೂಲತಃ ಬಾಂಗ್ಲಾದೇಶದ ಪ್ರಜೆಯಾಗಿದ್ದ. ಅಲ್ ಖೈದಾ ಅಂಗಸಂಸ್ಥೆಯ ಸದಸ್ಯನಾಗಿದ್ದ. ಮದರಸಾದ ಶಿಕ್ಷಕರಿಗೆ ಉಗ್ರ ಸಂಘಟನೆ ನಂಟಿರುವ ವಿಷಯ ತಿಳಿದ ಬಳಿಕ ಆತನನ್ನು ಬಂಧಿಸಿದ್ದರು. ಉಗ್ರ ಚಟುವಟಿಕೆ ಹಿನ್ನೆಲೆಯನ್ನು ಹೊಂದಿರುವ ಮದರಸಾವನ್ನು ಮುಸ್ಲಿಮರೇ ಧ್ವಂಸಗೊಳಿಸಿದ ಮೊದಲ ನಿದರ್ಶನ ಇದಾಗಿದೆ.

ಉಗ್ರ ಚಟುವಟಿಕೆ ಕುರಿತು ತಿಳಿದು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರೇ ಧ್ವಂಸಗೊಳಿಸಿದ್ದಾರೆ. ಉಗ್ರ ಚಟುವಟಿಕೆ ಕುರಿತು ತಿಳಿದು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರೇ ಧ್ವಂಸಗೊಳಿಸಿದ್ದಾರೆ.

ಉಗ್ರ ಚಟುವಟಿಕೆ ಕಾರಣದಿಂದ ಕಳೆದ 3 ತಿಂಗಳಲ್ಲಿ ಧ್ವಂಸಗೊಂಡ 4ನೇ ಮದರಸಾ ಇದಾಗಿದೆ.