Thursday, 12th December 2024

ಗುಜರಾತ್ ಮಾಜಿ ಸಿಎಂ ಮಾಧವಸಿನ್ಹಾ ಸೋಲಂಕಿ ವಿಧಿವಶ

ಅಹಮದಾಬಾದ್​: ಹಿರಿಯ ಕಾಂಗ್ರೆಸ್​ ನಾಯಕ, ಗುಜರಾತ್ ಮಾಜಿ ಮುಖ್ಯಮಂತ್ರಿ ಮಾಧವಸಿನ್ಹಾ ಸೋಲಂಕಿ (94) ಅವರು ಶನಿವಾರ ಗಾಂಧಿನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಕಾಯಿಲೆಯಿಂದ ಸೋಲಂಕಿ ವಿಧಿವಶರಾಗಿದ್ದು, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಹಿರಿಯ ಕಾಂಗ್ರೆಸ್​ ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಮಾಧವಸಿನ್ಹಾ ಸೋಲಂಕಿ ಅವರು ಅಸಾಧಾರಣ ನಾಯಕರಾಗಿದ್ದರು. ದಶಕಗಳವರೆಗೆ ಗುಜರಾತ್​ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅವರ ಸಾಮಾಜಿಕ ಸೇವೆ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಅವರ ನಿಧನದಿಂದ ದುಃಖವಾಗಿದ್ದು, ಅವರ ಮಗ ಭರತ್​ ಸೋಲಂಕಿ ಜತೆ ಮಾತನಾಡಿ ಸಂತಾಪ ಸೂಚಿಸಿದ್ದೇನೆಂದಿದ್ದಾರೆ.

ರಾಜಕೀಯದಿಂದಾಚೆಗೆ ಸೋಲಂಕಿ ಅವರು ಓದುವುದು ಮತ್ತು ಸಂಸ್ಕೃತಿಯ ಮೇಲೆ ತುಂಬಾ ಒಲವನ್ನು ಹೊಂದಿದ್ದರು.  ಅವರನ್ನು ಭೇಟಿ ಮಾಡಿದಾಗಲೆಲ್ಲ ಅಥವಾ ಮಾತನಾಡಿದಾಗಲೆಲ್ಲ ಪುಸ್ತಕ ಅಥವಾ ಇತ್ತೀಚೆಗೆ ಓದಿದ ಪುಸ್ತಕದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅವರೊಂದಿಗಿನ ಸಂವಾದಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜಕೀಯ ವಿಚಾರಕ್ಕೆ ಬಂದರೆ ಸೋಲಂಕಿ ಅವರು ಗುಜರಾತ್​ನಿಂದ ಎರಡು ಬಾರಿ ರಾಜ್ಯಸಭಾಗೆ ಆಯ್ಕೆಯಾಗಿದ್ದರು. ನರೇಂದ್ರ ಮೋದಿಗು ಮುಂಚೆ ಹೆಚ್ಚಕಾಲ ಮುಖ್ಯಮಂತ್ರಿಯಾಗಿ ಗುಜರಾತ್​ ಆಳಿದವರು. ಸೋಲಂಕಿ ಅವರ ಮಗ ಭರತ್​ಸಿನ್ಹಾ ಸೋಲಂಕಿ ಮಾಜಿ ಕೇಂದ್ರ ಸಚಿವರಾಗಿದ್ದಾರೆ.