Thursday, 19th September 2024

Madhya Pradesh : ಈ ಊರಲ್ಲಿ ಹೆಂಡತಿಯೂ ಬಾಡಿಗೆಗೆ ಸಿಕ್ತಾಳೆ; ಇನ್ನೂ ಇದೆ ಅನಿಷ್ಠ ಪದ್ಧತಿ!

Madhya Pradesh

ಜೈಪುರ: ಭಾರತದಲ್ಲಿ ಮಹಿಳೆಯರ ಸುರಕ್ಷತೆಯು ಚರ್ಚೆಯ ವಿಷಯ. ಇದೇ ವೇಳೆ ದೇಶದ ಕೆಲವು ಭಾಗಗಳಲ್ಲಿ ಅನುಸರಿಸಲಾಗುತ್ತಿರುವ ಕೆಲವು ಅನಿಷ್ಠ ಪದ್ಧತಿಗಳು ಮಹಿಳೆಯರನ್ನು, ವಿಶೇಷವಾಗಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಎಲ್ಲ ಯತ್ನಗಳನ್ನೂ ದುರ್ಬಲಗೊಳಿಸುತ್ತಿವೆ. ಮಧ್ಯಪ್ರದೇಶದ (Madhya Pradesh : ಈ ಊರಲ್ಲಿ ಹೆಂಡತಿಯೂ ಬಾಡಿಗೆಗೆ ಸಿಕ್ತಾಳೆ; ಇನ್ನೂ ಇದೆ ಅನಿಷ್ಠ ಪದ್ಧತಿ!) ಶಿವಪುರಿ ಗ್ರಾಮದಲ್ಲಿ ಚಾಲ್ತಿಯಲ್ಲಿರುವ ‘ಧಡಿಚಾ’ ಅಂತಹ ಒಂದು ಇದಕ್ಕೊಂದು ಉತ್ತಮ ಉದಾಹರಣೆ. ಇಲ್ಲಿ, ಮಹಿಳೆಯರನ್ನು ಮಾರುಕಟ್ಟೆಯಲ್ಲಿ ಸರಕುಗಳಂತೆ ‘ಖರೀದಿಸಲಾಗುತ್ತದೆ’ ಮತ್ತು ‘ಮಾರಾಟ’ ಮಾಡಲಾಗುತ್ತದೆ ಎಂದರೆ ನಂಬಲೇಬೇಕು.

ಇಲ್ಲಿ ಬಿಡ್‌ ಆಧಾರದ ಮೇಲೆ ಮಹಿಳೆಯರನ್ನು ‘ಬಾಡಿಗೆ’ಗೆ ಪಡೆಯಲು ಜನರು ದೂರದೂರದಿಂದ ಈ ಮಾರುಕಟ್ಟೆಗೆ ಬರುತ್ತಾರೆ. ‘ಬಾಡಿಗೆ’ಯ ಅವಧಿಯನ್ನು ಒಪ್ಪಂದದ ನಿಯಮಗಳಿಗೆ ಪೂರಕವಾಗಿದೆ. ಪುರುಷರು ತಾವು ಆಯ್ಕೆ ಮಾಡುವ ಯಾವುದೇ ಮಹಿಳೆಗೆ ನೋಡಿದ ನಂತರ ಬೆಲೆಯನ್ನು ನಿಗದಿಪಡಿಸುತ್ತಾರೆ ಮತ್ತು ನಂತರ ಒಪ್ಪಿದ ಮೊತ್ತವನ್ನು ಪಾವತಿಸಿದ ನಂತರ ಕರೆದೊಯ್ಯುತ್ತಾರೆ. ಅಂದ ಹಾಗೆ ಇಲ್ಲಿನ ಬಡ ಕುಟುಂಬಗಳು ತಮ್ಮ ಮ ನೆಯ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಾರೆ.

ಪುರುಷರು ನಾಣಾ ಕಾರಣಗಳಿಗಾಗಿ ಈ ಮಾರುಕಟ್ಟೆಯಿಂದ ಮಹಿಳೆಯರನ್ನು ಖರೀದಿಸುತ್ತಾರೆ ಎಂದು ಹೇಳಲಾಗಿದೆ. ಕೆಲವರು ತಮ್ಮ ಮನೆಗಳಲ್ಲಿ ವಯಸ್ಸಾದವರಿಗೆ ಸೇವೆ ಸಲ್ಲಿಸಲು ಮಹಿಳೆಯರನ್ನು ‘ಖರೀದಿಸುತ್ತಾರೆ’, ಇನ್ನು ಕೆಲವರು ಸೂಕ್ತ ವಧುವನ್ನು ಹುಡುಕಲು ಸಾಧ್ಯವಾಗದ ಕಾರಣ ಅವುಗಳನ್ನು ‘ಬಾಡಿಗೆಗೆ’ ಪಡೆಯುತ್ತಾರೆ. ವರದಿಗಳ ಪ್ರಕಾರ, ಮಹಿಳೆಯರು ‘ಒಪ್ಪಂದ’ವನ್ನು ನಿರಾಕರಿಸುವ ಹಕ್ಕನ್ನು ಕೂಡ ಹೊಂದಿದ್ದಾರೆ.

ಇದನ್ನೂ ಓದಿ: SIIMA awards 2024 : ಕಾಟೇರ, ಸಪ್ತಸಾಗರದಾಚೆ ಎಲ್ಲೊ ಸಿನಿಮಾಗೆ ಹಲವು ಪ್ರಶಸ್ತಿಗಳು

ಈ ಮಾರುಕಟ್ಟೆಯಿಂದ ‘ಖರೀದಿಸಿದ’ ಮಹಿಳೆಗೆ ಔಪಚಾರಿಕ ಒಪ್ಪಂದವನ್ನು ರೂಪಿಸಲಾಗುತ್ತದೆ. ‘ಬೆಲೆ’ 15,000 ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಬೆಲೆ ಕೆಲವು ಲಕ್ಷಗಳ ತನಕ ಹೋಗುತ್ತದೆ. ವರದಿಯ ಪ್ರಕಾರ ಇಲ್ಲಿ ಕನ್ಯೆಗೆ ಹೆಚ್ಚಿನ ಬೆಲೆ ಸಿಗುತ್ತದೆ. ಒಬ್ಬ ಪುರುಷನು ಮಹಿಳೆಯನ್ನು ಒಂದು ವರ್ಷ ಅಥವಾ ಕೆಲವು ತಿಂಗಳುಗಳವರೆಗೆ ಬಾಡಿಗೆಗೆ ತೆಗೆದುಕೊಳ್ಳಬಹುದು. ವರದಿಯ ಪ್ರಕಾರ, ಸ್ಟಾಂಪ್ ಪೇಪರ್ ಸೇರಿದಂತೆ ಒಪ್ಪಂದವನ್ನು ಸಿದ್ಧಪಡಿಸಲಾಗುತ್ತದೆ. ಸ್ಟ್ಯಾಂಪ್‌ ಬೆಲೆ 10 ರೂ.ಗಳಿಂದ ಪ್ರಾರಂಭವಾಗುತ್ತದೆ.