Sunday, 15th December 2024

Maharashtra Cabinet Expansion: ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ; ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಲ್ಲಿದೆ

Maharashtra Cabinet Expansion

ಮುಂಬೈ: ಮಹಾರಾಷ್ಟ್ರದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಮಹಾಯುತಿ (Mahayuti) ಸರ್ಕಾರದ ಸಚಿವ ಸಂಪುಟ ಭಾನುವಾರ (ಡಿ. 15) ವಿಸ್ತರಣೆಯಾಗಿದೆ (Maharashtra Cabinet Expansion). ನಾಗ್ಪುರ ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 39 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಸುಮಾರು 3 ವಾರಗಳ ನಂತರ ದೇವೇಂದ್ರ ಫಡ್ನವೀಸ್‌ (Devendra Fadnavis) ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಗರಿಷ್ಠ 43 ಮಂದಿ ಸಚಿವರನ್ನು ಹೊಂದುವ ಅವಕಾಶ ಇದೆ. ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪೈಕಿ 19 ಮಂದಿ ಬಿಜೆಪಿಯವರು. ಇನ್ನು ಶಿವ ಸೇನೆಯ 11 ಮತ್ತು ಎನ್‌ಸಿಪಿಯ 9 ಸಚಿವರು ಸಂಪುಟ ಸೇರಿದ್ದಾರೆ. ದೇವೇಂದ್ರ ಫಡ್ನವೀಸ್‌ ಮತ್ತು ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂಧೆ ಮತ್ತು ಅಜಿತ್‌ ಪವಾರ್‌ ಅವರನ್ನು ಸೇರಿಸಿದರೆ ಒಟ್ಟು 42 ಸ್ಥಾನ ಭರ್ತಿಯಾದಂತಾಗುತ್ತದೆ.

ಪ್ರಮಾಣ ವಚನ ಸ್ವೀಕರಿಸಿದ ಸಚಿವ ಸಂಪೂರ್ಣ ಪಟ್ಟಿ

ಬಿಜೆಪಿಯ 19 ಸಚಿವರು

ಚಂದ್ರಶೇಖರ ಬವಂಕುಲೆ
ರಾಧಾಕೃಷ್ಣ ವಿಖೆ ಪಾಟೀಲ್
ಚಂದ್ರಕಾಂತ್ ಪಾಟೀಲ್
ಗಿರೀಶ್ ಮಹಾಜನ್
ಗಣೇಶ್ ನಾಯ್ಕ್
ಮಂಗಲಪ್ರಭಾತ್ ಲೋಧಾ
ಜಯಕುಮಾರ್ ರಾವಲ್
ಪಂಕಜಾ ಮುಂಡೆ
ಅತುಲ್ ಉಳಿಸಿ
ಅಶೋಕ್ ಯುಕೆ
ಆಶಿಶ್ ಶೆಲಾರ್
ಶಿವೇಂದ್ರ ರಾಜೇ ಭೋಸಲೆ
ಜಯಕುಮಾರ್ ಗೋರೆ
ಸಂಜಯ್ ಸಾವಕರೆ
ನಿತೇಶ್ ರಾಣೆ
ಆಕಾಶ್ ಫಂಡ್ಕರ್
ಮಾಧುರಿ ಮಿಸಾಲ್ (Minister of State (ರಾಜ್ಯ ಖಾತೆ ಸಚಿವರು)-ಎಂಒಎಸ್‌)
ಡಾ.ಪಂಕಜ್ ಭೋಯರ್ (ಎಂಒಎಸ್)
ಮೇಘನಾ ಬೋರ್ಡಿಕರ್ ಸಕೋರ್ (ಎಂಒಎಸ್)

ಶಿವ ಸೇನೆಯ 11 ಸಚಿವರು

ಗುಲಾಬ್ರಾವ್ ಪಾಟೀಲ್
ದಾದಾ ಭೂಸೆ
ಸಂಜಯ್ ರಾಥೋಡ್
ಉದಯ್ ಸಮಂತ್
ಶಂಭುರಾಜೇ ದೇಸಾಯಿ
ಸಂಜಯ್ ಶಿರ್ಸಾತ್
ಪ್ರತಾಪ್ ಸರ್ನಾಯಕ್
ಭರತ್ ಗೋಗವಾಲೆ
ಪ್ರಕಾಶ್ ಅಬಿತ್ಕರ್
ಆಶಿಶ್ ಜೈಸ್ವಾಲ್ (ಎಂಒಎಸ್)
ಯೋಗೇಶ್ ಕದಮ್ (ಎಂಒಎಸ್)

ಎನ್‌ಸಿಪಿಯ 9 ಸಚಿವರು

ಹಸನ್ ಮುಶ್ರಿಫ್
ಧನಂಜಯ್ ಮುಂಡೆ
ದತ್ತಾತ್ರೇಯ ಭರ್ನೆ
ಅದಿತಿ ತತ್ಕರೆ
ಮಾಣಿಕ್ ರಾವ್ ಕೊಕಾಟೆ
ನರಹರಿ ಜಿರ್ವಾಲ್
ಮಕರಂದ್ ಜಾಧವ್ ಪಾಟೀಲ್
ಬಾಬಾಸಾಹೇಬ್ ಪಾಟೀಲ್
ಇಂದ್ರನಿಲ್ ನಾಯಕ್ (ಎಂಒಎಸ್)

ಮಹಾರಾಷ್ಟ್ರ ಚುನಾವಣಾ ಫಲಿತಾಂಶ

288 ಸೀಟುಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ 230 ಕಡೆ ಜಯಗಳಿಸಿದೆ. ಈ ಪೈಕಿ ಬಿಜೆಪಿಯೊಂದೇ 132 ಸ್ಥಾನಗಳನ್ನು ಗೆದ್ದುಕೊಂಡಿದೆ. ಶಿವ ಸೇನೆ ಮತ್ತು ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸೀಟು ತನ್ನದಾಗಿಸಿಕೊಂಡಿದೆ. ಡಿ. 5ರಂದು ದೇವೇಂದ್ರ ಫಡ್ನವೀಸ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದೇ ಏಕನಾಥ್‌ ಶಿಂಧೆ ಮತ್ತು ಅಜಿತ್‌ ಪವಾರ್‌ ಅವರೂ ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ: Maharashtra oath Ceremony: ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವೀಸ್‌ ಪ್ರಮಾಣ ವಚನ