ನಾಗ್ಪುರ: ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಗೂ(Maharashtra Cabinet) ಮುನ್ನ ಮಹಾಯುತಿ(Mahayuti) ಮುಖ್ಯಮಂತ್ರಿ(Chief Minister) ದೇವೇಂದ್ರ ಫಡ್ನವೀಸ್(Devendra Fadnavis) ಅವರು ಇಂದು ನಾಗ್ಪುರದಲ್ಲಿ(Nagpur) ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ(Floral Tribute) ಸಲ್ಲಿಸಿದ್ದಾರೆ. 2024 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟವು ದೊಡ್ಡಮಟ್ಟದ ಗೆಲುವು ಸಾಧಿಸಿದ ನಂತರ ದೇವೇಂದ್ರ ಫಡ್ನವೀಸ್ ಮೊದಲ ಬಾರಿಗೆ ನಗರದಲ್ಲಿ ರೋಡ್‌ಶೋ(Road Show) ನಡೆಸಿದ್ದಾರೆ.
#VIDEO | #Nagpur | Maharashtra CM Devendra Fadnavis pays floral tribute to Dr Bhim Rao Ambedkar in Nagpur as he conducts a roadshow here. The state cabinet expansion will take place today.#DevendraFadnavis #DrBRAmbedkar #MaharashtraCabinet #MaharashtraCM #MaharashtraPolitics pic.twitter.com/LhsZcl6JaX
— Lokmat Times Nagpur (@LokmatTimes_ngp) December 15, 2024
ರೋಡ್ ಶೋ ವೇಳೆ ಮುಖ್ಯಮಂತ್ರಿ ಅವರೊಂದಿಗೆ ಅವರ ಪತ್ನಿ ಅಮೃತಾ ಫಡ್ನವೀಸ್ ಮತ್ತು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಅವರೊಂದಿಗೆ ಇದ್ದರು ಎಂದು ತಿಳಿದು ಬಂದಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅಮೃತಾ ಫಡ್ನವಿಸ್, ತಮ್ಮ ಹೆಗಲ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಇಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಶಿವಸೇನೆ ಶಾಸಕ ಭರತ್‌ಶೆಟ್ ಗೋಗವಾಲೆ ಹೇಳಿದ್ದಾರೆ. ಅವರೂ ಸೇರಿದಂತೆ ಅವರ ಪಕ್ಷದ 12 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದರಲ್ಲಿ ಏಳು ಹೊಸ ಶಾಸಕರು ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
“ಪ್ರಮಾಣ ವಚನ ಸಮಾರಂಭ ಇಂದು ಸಂಜೆ 4 ಗಂಟೆಗೆ ನಡೆಯಲಿದೆ. ಹಾಗಾಗಿ ನಾವೆಲ್ಲರೂ ನಾಗ್ಪುರಕ್ಕೆ ಬಂದಿದ್ದೇವೆ. ಏಳು ಮಂದಿ ಹೊಸಬರಿದ್ದು 5 ಮಂದಿ ಈ ಹಿಂದೆ ಇದ್ದವರೇ ಇರಲಿದ್ದಾರೆ” ಎಂದು ಗೋಗಾವಾಲೆ ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ ಮಾತನಾಡಿ, “ಸಿಎಂ ದೇವೇಂದ್ರ ಫಡ್ನವೀಸ್ ಅವರ ತಂಡದಲ್ಲಿ ಮತ್ತೊಮ್ಮೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನಗೆ ಖುಷಿ ತಂದಿದೆ. ನಾನು ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದಿದ್ದಾರೆ.
ಸುಮಾರು 30 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯನ್ನು ಒಳಗೊಂಡಂತೆ ಗರಿಷ್ಠ 40 ಸಚಿವರ ಸಂಪುಟ ರಚನೆ ಮಾಡಲು ಅವಕಾಶವಿದೆ. ಬಿಜೆಪಿ 20-21, ಶಿವಸೇನೆ (ಶಿಂಧೆ) 11-12, ಎನ್‌ಸಿಪಿ (ಅಜಿತ್) 9-10 ಸಚಿವ ಸ್ಥಾನಗಳು ದೊರೆಯಲಿದ್ದು, ನಾಗ್ಪುರದ ರಾಜಭವನದಲ್ಲಿ ಇಂದು(ಡಿ.15) ಮಧ್ಯಾಹ್ನ 4 ಗಂಟೆಗೆ ಪ್ರಮಾಣ ವಚನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿಯಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ (ಬಿಜೆಪಿ,ಶಿವಸೇನೆ,ಎನ್‌ಸಿಪಿ) ಮೈತ್ರಿಕೂಟ 288 ಸ್ಥಾನಗಳ ಪೈಕಿ 230ರಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿತು. ಬಿಜೆಪಿ 132, ಶಿವಸೇನೆ (ಶಿಂಧೆ) 57 ಮತ್ತು ಎನ್‌ಸಿಪಿ(ಅಜಿತ್) 41 ಸ್ಥಾನಗಳನ್ನು ಪಡೆದಿದ್ದವು. ದೇವೇಂದ್ರ ಫಡ್ನವೀಸ್ ಅತೀ ಕಿರಿಯ ವಯಸ್ಸಿನಲ್ಲಿ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಈ ಸುದ್ದಿಯನ್ನೂ ಓದಿ:Viral News: 26 ವರ್ಷಗಳ ಹಿಂದೆ ಕಿಡ್ನಾಪ್ ಆಗಿದ್ದವ ಮರಳಿ ಕೋಟ್ಯಧಿಪತಿ ಪೋಷಕರ ಮಡಿಲಿಗೆ- ಆದರೂ ಈ ಶ್ರೀಮಂತಿಕೆ ಬೇಡ ಎಂದಿದ್ದೇಕೆ?