ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ(Maharashtra Elections) ರಂಗೇರಿದ್ದು, ಅಜಿತ್ ಪವಾರ್(Ajit Pawar) ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಭಾನುವಾರ ತನ್ನ ಮೂರನೇ ಅಭ್ಯರ್ಥಿ ಪಟ್ಟಿ(Candidate List) ರಿಲೀಸ್ ಮಾಡಿದೆ. ನಾಲ್ವರು ಅಭ್ಯರ್ಥಿಗಳ ಹೆಸರಿರುವ ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ಎನ್‌ಸಿಪಿ ಒಟ್ಟು 49 ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸುತ್ತಿದೆ.
ಇಂದು ಬಿಡುಗಡೆಯಾಗಿರುವ ಪಟ್ಟಿಯಲ್ಲಿ, ಎನ್‌ಸಿಪಿ ಗೆವ್ರಾಯ್‌ನಿಂದ ವಿಜಯ್ ಸಿಂಗ್ ಪಂಡಿತ್, ಫಾಲ್ಟನ್‌ನಿಂದ ಸಚಿನ್ ಸುಧಾಕರ್ ಪಾಟೀಲ್, ನಿಫಾಡ್‌ನಿಂದ ದಿಲೀಪ್ ಬಣಕಾರ್ ಮತ್ತು ಪಾರ್ನರ್‌ನಿಂದ ಕಾಶಿನಾಥ್ ಡೇಟ್ ಅವರನ್ನು ಕಣಕ್ಕಿಳಿಸಿದೆ. ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರಾಜ್ಯಾಧ್ಯಕ್ಷ ಸುನೀಲ್ ತಟ್ಕರೆ ಇಂದು ಈ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇನ್ನು ಪಕ್ಷದ ಮೊದಲ ಮತ್ತು ಎರಡನೇ ಪಟ್ಟಿಗಳನ್ನು ಕ್ರಮವಾಗಿ ಅಕ್ಟೋಬರ್ 23 ಮತ್ತು 25 ರಂದು ಬಿಡುಗಡೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಬಾರಾಮತಿಯಿಂದ ಸ್ಪರ್ಧಿಸುತ್ತಿದ್ದಾರೆ, ಅಲ್ಲಿ ಸಂಭವನೀಯ “ಪವಾರ್ ವರ್ಸಸ್ ಪವಾರ್” ಹಣಾಹಣಿಯು ನಿರೀಕ್ಷಿತವಾಗಿದೆ, ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕ ಯುಗೇಂದ್ರ ಪವಾರ್ ಅವರಿಗೆ ಸವಾಲು ಹಾಕುವ ಸಾಧ್ಯತೆಯಿದೆ.
ಮಹಾರಾಷ್ಟ್ರದ 288 ಸದಸ್ಯರ ಅಸೆಂಬ್ಲಿಗೆ ನವೆಂಬರ್ 20 ರಂದು ಚುನಾವಣೆಯನ್ನು ನಿಗದಿಪಡಿಸಲಾಗಿದೆ, ನವೆಂಬರ್ 23 ರಂದು ಮತಗಳನ್ನು ಎಣಿಕೆ ಮಾಡಲಾಗುತ್ತದೆ, ಪ್ರಸ್ತುತ ಅಸೆಂಬ್ಲಿ ಅವಧಿಯು ನವೆಂಬರ್ 26 ರಂದು ಕೊನೆಗೊಳ್ಳಲಿದೆ.
ಎನ್‌ಸಿಪಿ, ಬಿಜೆಪಿ ಮತ್ತು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ, ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಮತ್ತು ಶಿವಸೇನೆ (ಯುಬಿಟಿ), ಎನ್ಸಿಪಿ (ಶರದ್ ಪವಾರ್ ಬಣ) ಮತ್ತು ಕಾಂಗ್ರೆಸ್ ಒಳಗೊಂಡ ಪ್ರತಿಪಕ್ಷ ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 105 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿದೆ. 2014 ರಲ್ಲಿ ಬಿಜೆಪಿ 122, ಶಿವಸೇನೆ 63 ಮತ್ತು ಕಾಂಗ್ರೆಸ್ 42 ಸ್ಥಾನಗಳನ್ನು ಗಳಿಸಿತ್ತು.
ಈ ಸುದ್ದಿಯನ್ನೂ ಓದಿ: Arvind Kejriwal : ಮಹಾರಾಷ್ಟ್ರದಲ್ಲಿ ಆಪ್ ಸ್ಪರ್ಧೆ ಇಲ್ಲ; ಮಿತ್ರ ಪಕ್ಷಕ್ಕಾಗಿ ಪ್ರಚಾರ ಮಾಡಲಿದ್ದಾರೆ ಕೇಜ್ರಿವಾಲ್