Thursday, 12th December 2024

Maharashtra government: ಮಹಾರಾಷ್ಟ್ರದಲ್ಲಿ ʻಗೋವು ರಾಜ್ಯಮಾತೆʼ; ಚುನಾವಣೆಗೂ ಮುನ್ನ ಸರ್ಕಾರದಿಂದ ಮಹತ್ವದ ಘೋಷಣೆ

Maharashtra Government

ಮುಂಬೈ: ಇನ್ನೇನು ವಿಧಾನಸಭೆ ಚುನಾವಣೆ(Assembly election)ಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮಹಾರಾಷ್ಟ್ರ ಸರಕಾರ(Maharashtra government) ಗೋವನ್ನು ʼರಾಜ್ಯ ಮಾತೆʼ ಎಂದು ಘೋಷಿಸಿದೆ. ಭಾರತದಲ್ಲಿ ಗೋವುಗಳ ಸಾಂಸ್ಕೃತಿಕ ಪ್ರಾಮುಖ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ಮಹಾಯುತಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಅಧಿಕೃತ ಆದೇಶದಲ್ಲಿ, ಗೋವುಗಳು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ ಮತ್ತು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಪಾರಂಪರಿಕಾ ಮಹತ್ವವನ್ನು ಹೊಂದಿದೆ ಎಂದಿರುವ ಸರ್ಕಾರ, ಭಾರತೀಯ ಸಂಪ್ರದಾಯದಲ್ಲಿ ಗೋವುಗಳ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ . ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ದೇಸಿ ಹಸುಗಳು ಕಡಿಮೆಯಾಗುತ್ತಿರುವ ಬಗ್ಗೆ ಕಳವಳ

ಭಾರತದಾದ್ಯಂತ ಕಂಡುಬರುವ ವಿವಿಧ ತಳಿಯ ಹಸುಗಳ ಬಗ್ಗೆ ಪ್ರಸ್ತಾಪಿಸಿಸ ಮಹಾರಾಷ್ಟ್ರ ಸರ್ಕಾರ, ದೇಶದಲ್ಲಿ ಸ್ಥಳೀಯ ಹಸುಗಳ ಸಂಖ್ಯೆಯಲ್ಲಿನ ಇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿತು. ತನ್ನ ಅಧಿಕೃತ ಆದೇಶದಲ್ಲಿ, ಸರ್ಕಾರವು ಕೃಷಿಯಲ್ಲಿ ಹಸುವಿನ ಸಗಣಿ ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿತು. ಅದರ ಮೂಲಕ ಮನುಷ್ಯನಿಗೆ ಮುಖ್ಯ ಆಹಾರದಲ್ಲಿ ಪೋಷಣೆ ಸಿಗುತ್ತದೆ. ಹಸು ಮತ್ತು ಅದರ ಉತ್ಪನ್ನಗಳಿಗೆ ಸಂಬಂಧಿಸಿದ ಸಾಮಾಜಿಕ-ಆರ್ಥಿಕ ಅಂಶಗಳ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಪರಿಗಣಿಸಿ, ಸರ್ಕಾರವು ಸ್ಥಳೀಯ ಹಸುಗಳನ್ನು ಸಾಕಲು ಪಶುಪಾಲಕರಿಗೆ ಬೆಂಬಲ ಸೂಚಿಸಿದೆ.

ಗಮನಾರ್ಹವಾಗಿ, ಭಾರತದಲ್ಲಿ, ಗೋವಿಗೆ ತಾಯಿಯ ಸ್ಥಾನಮಾನವನ್ನು ನೀಡಲಾಗಿದೆ ಮತ್ತು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಇದಲ್ಲದೆ, ಇದರ ಹಾಲು, ಮೂತ್ರ ಮತ್ತು ಸಗಣಿಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಹೇರಳವಾಗಿ ಬಳಸಲಾಗುತ್ತದೆ. ಹಸುವಿನ ಹಾಲು ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಗೋಮೂತ್ರದಲ್ಲಿ ಅನೇಕ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಎಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸೋಮವಾರ ಹಸುವಿಗೆ ಹೊಸ ಸ್ಥಾನಮಾನ ನೀಡಿದ್ದು, ಪ್ರಾಣಿಯನ್ನು ಈಗ “ರಾಜ್ಯ ಮಾತಾ” ಎಂದು ಘೋಷಿಸಿದೆ.

ಈ ಸುದ್ದಿಯನ್ನೂ ಓದಿ: Maharashtra Elections : ನವೆಂಬರ್ ಎರಡನೇ ವಾರದಲ್ಲಿ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ? ಸಿಎಂ ಸೂಚನೆ