Sunday, 19th May 2024

ನಕಲಿ ಇನ್‌ವಾಯ್ಸ್‌ ಮೂಲಕ 19 ಕೋಟಿ ರೂ. ಮೌಲ್ಯದ ವಂಚನೆ: ಓರ್ವನ ಬಂಧನ

ಥಾಣೆ: ನಕಲಿ ಇನ್‌ವಾಯ್ಸ್‌ಗಳ ಮೂಲಕ 19 ಕೋಟಿ ರೂ. ಮೌಲ್ಯದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದು ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಚೀನಾದ ಸ್ಮಾರ್ಟ್‌ಫೋನ್ ತಯಾರಕರೊಬ್ಬರ ಹಿರಿಯ ಅಧಿಕಾರಿಯನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಕಮಿಷನರೇಟ್ ಬಂಧಿಸಿದೆ.

ಒಪ್ಪೋ ಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಹಣಕಾಸು ಮತ್ತು ಖಾತೆ ವಿಭಾಗದ ವ್ಯವಸ್ಥಾಪಕ ಮಹೇಂದ್ರ ಕುಮಾರ್ ರಾವತ್ ಅವರನ್ನು ಭಿವಂಡಿ ಪಟ್ಟಣದಲ್ಲಿ ಬಂಧಿಸಿ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 3 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ.

ತನಿಖೆಯಲ್ಲಿ ಒಪ್ಪೋ ಮಹಾರಾಷ್ಟ್ರವು ಯಾವುದೇ ಸರಕುಗಳನ್ನು ಪಡೆಯದೆ ನಕಲಿ ಐಟಿಸಿಯನ್ನು ಪಡೆದುಕೊಳ್ಳುವಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಿಕೆ ತಿಳಿಸಿದೆ.

error: Content is protected !!