Friday, 22nd November 2024

Mahesh Babu: ನಮ್ರತಾಗೆ ಕೆಲಸ ಮಾಡಬಾರದೆಂದು ಮದುವೆಗೆ ಮುಂಚೆಯೇ ಷರತ್ತು ಹಾಕಿದ್ದರಂತೆ ಮಹೇಶ್ ಬಾಬು

Mahesh Babu

ಮದುವೆ ಬಳಿಕ ಕೆಲಸಕ್ಕೆ ಹೋಗಬಾರದು ಎಂದು ಟಾಲಿವುಡ್‌ ನಟ ಮಹೇಶ್ ಬಾಬು (Mahesh Babu) ಅವರು ನಟಿ ನಮ್ರತಾ ಶಿರೋಡ್ಕರ್ (Namrata Shirodkar ) ಅವರಿಗೆ ಮದುವೆ ಮುಂಚೆ ಷರತ್ತು ಹಾಕಿದ್ದರು ಎಂಬುದಾಗಿ ಸೆಲೆಬ್ರಿಟಿ ಪತ್ರಕರ್ತೆ ಪ್ರೇಮಾ ಅವರೊಂದಿಗಿನ ಕ್ಯಾಂಡಿಡ್ ಚಾಟ್‌ನಲ್ಲಿ ಸ್ವತಃ ನಮ್ರತಾ ಹೇಳಿಕೊಂಡಿದ್ದಾರೆ. ವಾಸ್ತವ್, ಪುಕಾರ್ ಮತ್ತು ಕಚ್ಚೆ ಧಾಗೆಯಂತಹ ಹಿಟ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ನಮ್ರತಾ ಶಿರೋಡ್ಕರ್ ಅವರು ಪತಿ ಮಹೇಶ್ ಬಾಬು ಅವರು ಮದುವೆಗೆ ಮೊದಲು ಇಟ್ಟ ಷರತ್ತುಗಳ ಬಗ್ಗೆ ಚಾಟ್‌ನಲ್ಲಿ ಹೇಳಿಕೊಂಡಿದ್ದಾರೆ.

2005ರಲ್ಲಿ ಮಹೇಶ್ ಬಾಬು ಅವರನ್ನು ವಿವಾಹವಾದ ನಮ್ರತಾ ಅವರಿಗೆ ಮದುವೆಗೆ ಮುಂಚೆ ಕೆಲಸ ಬಿಡಲು ಮಹೇಶ್ ಬಾಬು ಷರತ್ತು ಹಾಕಿದ್ದರು. ಹೀಗಾಗಿ ಅವರು ನಂತರ ಸಿನಿಮಾಗಳಲ್ಲಿ ಕೆಲಸ ಮಾಡಿಲ್ಲ. ಒಂದು ವೇಳೆ ನಾನು ನಟಿಯಾಗಿ ಇರದೇ ಇದ್ದರೂ ಮಹೇಶ್ ಕೆಲಸ ತೊರೆಯುವಂತೆ ಕೇಳುತ್ತಿದ್ದರು. ಯಾಕೆಂದರೆ ಸೂಪರ್‌ಸ್ಟಾರ್‌ಗೆ ‘ಕೆಲಸ ಮಾಡದ ಹೆಂಡತಿ’ ಬೇಕಾಗಿತ್ತು. ತಮಗೆ ಕಚೇರಿ ಕೆಲಸ ಮಾಡದ ಹೆಂಡತಿ ಬೇಕು ಎಂದು ಮಹೇಶ್ ತುಂಬಾ ಸ್ಪಷ್ಟವಾಗಿ ಹೇಳಿದ್ದರು. ಯಾವುದಾದರೂ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೂ ಕೆಲಸ ಬಿಡು ಎಂದು ಅವರು ಹೇಳುತ್ತಿದ್ದರು ಎಂದು ನಮ್ರತಾ ತಿಳಿಸಿದ್ದಾರೆ.

ನಮ್ರತಾ ಶಿರೋಡ್ಕರ್ ಅವರು ಮಹೇಶ್ ಬಾಬು ಬಂಗಲೆಗೆ ಹೋಗುವ ಮೊದಲು ಹೈದರಾಬಾದ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವಂತೆ ಕೇಳಿಕೊಂಡಿದ್ದನ್ನು ನೆನಪಿಸಿಕೊಂಡ ನಮ್ರತಾ, ನಾನು ದೊಡ್ಡ ಮನೆಗಳಲ್ಲಿ ವಾಸಿಸುವ ಅಭ್ಯಾಸವನ್ನು ಹೊಂದಿರಲಿಲ್ಲ. ಹೀಗಾಗಿ ತುಂಬಾ ಭಯವಾಗುತ್ತಿತ್ತು ಎಂದು ತಿಳಿಸಿದ್ದಾರೆ.

Mahesh Babu

ನಾನು ಮುಂಬೈನಿಂದ ಬಂದವಳು. ಮದುವೆಯ ಅನಂತರ ನಾವು ಮೊದಲು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಿದ್ದೇವೆ. ಬೃಹತ್ ಬಂಗಲೆಗಳಿಗೆ ನಾನು ಹೇಗೆ ಹೊಂದಿಕೊಳ್ಳುತ್ತೇನೆ ಎಂದು ನನಗೆ ತಿಳಿದಿರಲಿಲ್ಲ. ನಾನು ಹೆದರುತ್ತಿದ್ದೆ ಆದ್ದರಿಂದ ಅವರು ನನ್ನೊಂದಿಗೆ ಅಪಾರ್ಟ್‌ಮೆಂಟ್ ನಲ್ಲಿ ವಾಸಿಸಬೇಕು ಎಂಬುದು ನನ್ನ ಷರತ್ತಾಗಿತ್ತು. ನಾನು ಹೈದರಾಬಾದ್‌ಗೆ ಬಂದರೆ ನಾನು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತೇನೆ ಎಂದು ಮಹೇಶ್ ಗೆ ಹೇಳಿರುವುದಾಗಿ ನಮ್ರತಾ ಹೇಳಿಕೊಂಡಿದ್ದಾರೆ.

ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು ಅವರ ಪ್ರೇಮಕಥೆಯು ಒಂದು ಸಿನಿಮಾ ಕಥೆಯಂತಿದೆ. ಅವರು ಮೊದಲ ಬಾರಿಗೆ 2000ರಲ್ಲಿ ವಂಶಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಭೇಟಿಯಾಗಿದ್ದರು.

Mahesh Babu

ಮೊದಲ ಭೇಟಿಯಲ್ಲೇ ಪ್ರೀತಿಯಾಗಿದ್ದರೂ ಹೆಚ್ಚು ಸಮಯ ಅದನ್ನು ಮುಚ್ಚಿಟ್ಟಿದ್ದರು. 2004ರಲ್ಲಿ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದರು. 1993ರಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಅಲಂಕರಿಸಿದ್ದ, ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದ ನಮ್ರತಾ 2005ರಲ್ಲಿ ಮಹೇಶ್ ಅವರನ್ನು ಮದುವೆಯಾದರು. ಬಳಿಕ ಸಿನಿಮಾ ಜಗತ್ತಿನಿಂದ ದೂರವಾದರು. ಅವರ ವಿವಾಹವು ಮುಂಬೈನಲ್ಲಿ ಸಾಂಪ್ರದಾಯಿಕ ತೆಲುಗು ಸಂಪ್ರದಾಯದಂತೆ ನಡೆದಿತ್ತು.

Abhishek-Aishwarya Fight: ಸಾರ್ವಜನಿಕವಾಗಿಯೇ ಕಿತ್ತಾಡಿಕೊಂಡ ಅಭಿಷೇಕ್‌ ಬಚ್ಚನ್‌-ಐಶ್ವರ್ಯಾ ರೈ

ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು 2006 ರಲ್ಲಿ ತಮ್ಮ ಮೊದಲ ಮಗು ಗೌತಮ್, 2012 ರಲ್ಲಿ ಮಗಳು ಸಿತಾರಾ ಅವರನ್ನು ಸ್ವಾಗತಿಸಿದ್ದಾರೆ.