Friday, 22nd November 2024

Mahindra Veero : ಹೊಚ್ಚ ಹೊಸ ವೀರೋ ಬಿಡುಗಡೆ ಮಾಡಿದ ಮಹೀಂದ್ರಾ

Mahindra Veero

ಪುಣೆ : ಭಾರತದಲ್ಲಿನ ಯುಟಿಲಿಟಿ ವೆಹಿಕಲ್‌ಗಳ ಪ್ರಮುಖ ತಯಾರಕರು ಮತ್ತು ಎಲ್‌ಸಿವಿ 3.5 ಟನ್ ವಿಭಾಗದ ವಾಹನ ತಯಾರಕರಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಇಂದು ಮಹೀಂದ್ರಾ ವೀರೊ (Mahindra Veero) ಎಂಬ ಹೊಸ ವಾಹನ ಬಿಡುಗಡೆ ಮಾಡಿದೆ. ಮಹೀಂದ್ರಾ ವೀರೋ ಆರಂಭಿಕ ಬೆಲೆ ₹ 7.99 ಲಕ್ಷ ರೂಪಾಯಿ. ಎಲ್‌ಸಿವಿ 3.5 ಟನ್ ವಿಭಾಗಕ್ಕೆ ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾದ ಮಹೀಂದ್ರಾ ವೀರೋ ವಿಭಾಗದಲ್ಲಿಯೇ ಅತ್ಯುತ್ತಮವಾದ ಮೈಲೇಜ್‌ ನೀಡುವ ವಾಹನವಾಗಿದೆ. ಹಲವು ವಿಧಗಳ ದೃಢ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಹೊಸ ವಾಹನವು ಅಸಾಧಾರಣ ಕಾರ್ಯಕ್ಷಮತೆ, ಸುರಕ್ಷತಾ ಫೀಚರ್ ಗಳು, ಗ್ರಾಹಕ ರಕ್ಷಣೆ ಮತ್ತು ಪ್ರೀಮಿಯಂ ಕ್ಯಾಬಿನ್ ಹೊಂದಿದೆ.

ಮಹೀಂದ್ರಾ ಹೊಸತಾಗಿ ತನ್ನ ಹೊಸ ಅರ್ಬನ್ ಪ್ರಾಸ್ಪರ್ ಪ್ಲಾಟ್‌ಫಾರ್ಮ್ ಪರಿಚಯಿಸಿದ್ದು, ಇದು ಭಾರತದ ಮೊದಲ ಗ್ರೌಂಡ್- ಅಪ್ ಮಲ್ಟಿ- ಎನರ್ಜಿ ಮಾಡ್ಯುಲರ್ ಸಿವಿ ಪ್ಲಾಟ್‌ಫಾರ್ಮ್ ಆಗಿದೆ. ವಿಭಾಗದಲ್ಲಿಯೇ ಶ್ರೇಷ್ಠ ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ. ಈ ವಾಹನವನ್ನು 1 ಟನ್‌ನಿಂದ 2 ಟನ್‌ಗೂ ಹೆಚ್ಚು ಪೇಲೋಡ್‌ ಸಾಮರ್ಥ್ಯ ಹೊಂದಿದೆ. ಸಿಎನ್‌ಜಿ, ಮತ್ತು ಎಲೆಕ್ಟ್ರಿಕ್ ಸೇರಿದಂತೆ ಹಲವು ಪವರ್‌ಟ್ರೇನ್ ಆಯ್ಕೆಗಳಲ್ಲಿ ವಾಹನ ದೊರೆಯುತ್ತದೆ.

ಮಹೀಂದ್ರಾ ವೀರೋ ವಾಹನವು ಈ ವಿಭಾಗದಲ್ಲಿಯೇ ಹಲವು ಫೀಚರ್‌ಗಳನ್ನು ಹೊಂದಿದೆ. ಡ್ರೈವರ್- ಸೈಡ್ ಏರ್‌ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 26.03 ಸೆಂ ಟಚ್‌ಸ್ಕ್ರೀನ್ ಇನ್ಫೋಟೇನ್‌ ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ ಮತ್ತು ಪವರ್ ವಿಂಡೋಗಳಂತಹ ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ. 1,600 ಕೆಜಿಯ ಪೇಲೋಡ್ ಸಾಮರ್ಥ್ಯ, 3035 ಎಂಎಂ ಕಾರ್ಗೊ ಸ್ಪೇಸ್‌ ನೀಡಲಾಗಿದೆ. ಡೀಸೆಲ್‌ ವೇರಿಯೆಂಟ್ 18.4 ಕಿ.ಮೀ ಮೈಲೇಝ್ ನೀಡುತ್ತದೆ. ಇದು 5.1 ಮೀ ಟರ್ನಿಂಗ್ ರೇಡಿಯಸ್ ಹೊಂದಿದೆ.

ಮಹೀಂದ್ರಾ ಲಿಮಿಟೆಡ್‌ ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್‌ ನಕ್ರಾ ಮಾತನಾಡಿ “ಎಲ್‌ಸಿವಿ 3.5 ಟನ್ ವಿಭಾಗದಲ್ಲಿ ಬಿಡುಗಡೆ ಆಗಿರುವ ಮಹೀಂದ್ರಾ ವೀರೋ ಆ ವಿಭಾಗದಲ್ಲಿ ನಾವು ಹೊಂದಿರುವ ಪ್ರಾಬಲ್ಯವನ್ನು ಹೆಚ್ಚಿಸುತ್ತದೆ. ಗ್ರಾಹಕರಿಗೆ ಹೆಚ್ಚು ಆದಾಯ ಗಳಿಸಲು ಸಹಾಯ ಮಾಡುವಂತೆ ಈ ವಾಹನವನ್ನು ನಿರ್ಮಿಸಲಾಗಿದೆ. ಇದು ವಿಭಾಗ ಶ್ರೇಷ್ಠ ಪೇಲೋಡ್ ಸಾಮರ್ಥ್ಯ, ಅತ್ಯಾಕರ್ಷಕ ಮೈಲೇಜ್ ಮತ್ತು ಅತ್ಯುನ್ನತ ಕುಶಲತೆಯನ್ನು ಇದು ಹೊಂದಿದೆ. ವಿಭಾಗದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಲಾಗಿರುವ ತಂತ್ರಜ್ಞಾನ ಮತ್ತು ಪೀಚರ್‌ಗಳು ಮಹೀಂದ್ರಾ ವೀರೋವನ್ನು ಈ ವಿಭಾಗದಲ್ಲಿನ ಇತರ ಉತ್ಪನ್ನಗಳಿಗಿಂತ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ನ ಆಟೋಮೋಟಿವ್ ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಡೆವಲಪ್‌ಮೆಂಟ್ ವಿಭಾಗದ ಅಧ್ಯಕ್ಷರಾದ ಆರ್ ವೇಲುಸಾಮಿ ಮಾತನಾಡಿ, “ಮಹೀಂದ್ರಾ ವೀರೋ ವಾಹನವನ್ನು ಹೊಚ್ಚ ಹೊಸ ಅರ್ಬನ್ ಪ್ರಾಸ್ಪರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದ್ದು, ಹೊಸತನದ ಮತ್ತು ವೈವಿಧ್ಯಮಯ ಉತ್ಪನ್ನವನ್ನು ನೀಡುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಿಭಾಗವನ್ನು ಒಳಗೊಂಡು ಬಹು ಪವರ್‌ಟ್ರೇನ್ ಆಯ್ಕೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿ” ಎಂದು ಹೇಳಿದರು.

ಇದನ್ನೂ ಓದಿ: HP Printer : ಹೊಸ ಕಲರ್‌ ಲೇಸರ್‌ಜೆಟ್ ಪ್ರೊ ಪ್ರಿಂಟರ್‌‌ಗಳನ್ನು ಪರಿಚಯಿಸಿದ ಎಚ್‌ಪಿ

ಅತಿ ಹೆಚ್ಚು ಉಳಿತಾಯ

ಮಹೀಂದ್ರಾ ವೀರೋ ಡೀಸೆಲ್ ವೇರಿಯೆಂಟ್‌ 18.4 ಕಿ.ಮೀ ಮೈಲೇನ್ ನೀಡುತ್ತದೆ. ಸಿಎನ್‌ಜಿ 19.2 ಕಿ.ಮೀ ಮೈಲೇಜ್ ಕೊಡುತ್ತದೆ. ವೀರೋ 20,000 ಕಿ.ಮೀ ಸರ್ವೀಸ್ ಸೌಲಭ್ಯವನ್ನೂ ಹೊಂದಿದೆ. ಸುಧಾರಿತ ಎಂಜಿನ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್, ಡ್ರೈವರ್ ಫ್ಯೂಯಲ್ ಕೋಚಿಂಗ್ ಮತ್ತು ಇಕೋ ಮೋಡ್ ಇಂಧನವನ್ನು ಉಳಿಸುತ್ತದೆ. ಮಹೀಂದ್ರಾ ವೀರೋ ಸ್ಟ್ಯಾಂಡರ್ಡ್ 3-ವರ್ಷ/1 ಲಕ್ಷ ಕಿಮೀ ವಾರಂಟಿಯೂ ಪಡೆಯುತ್ತದೆ.

ಸುರಕ್ಷತಾ ಫೀಚರ್‌ಗಳು

ಡ್ರೈವರ್ ಸೈಡ್ ಏರ್‌ಬ್ಯಾಗ್‌ ಹೆಚ್ಚುವರಿ ಸುರಕ್ಷತೆ ಒದಗಿಸುತ್ತದೆ. ಮಹೀಂದ್ರ ವೀರೋ ಎಐಎಸ್096 ಕಂಪ್ಲಯನ್ಸ್ ಕ್ರ್ಯಾಶ್ ಸೇಫ್ಟಿ ಸ್ಟಾಂಡರ್ಡ್‌ಗಳಿಗೆ ಬದ್ಧವಾಗಿದೆ. ಚಾಸಿಸ್ ಮತ್ತು ಕಾರ್ಗೋ ಬಾಡಿಯಲ್ಲಿ ಉಕ್ಕಿನ (ಎಚ್ಎಸ್ಎಸ್) ಅತ್ಯಧಿಕ ಬಳಕೆ, ಉನ್ನತ ಮಟ್ಟ ಎಂಜಿನಿಯರಿಂಗ್‌ ಜೊತೆ ಸೇರಿ ವಾಹನದ ದೃಢತೆ ಹೆಚ್ಚಿಸುತ್ತದೆ. ವಾಹನವು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ಫಾಲ್ಸ್ ಸ್ಟಾರ್ಟ್ ಅವಾಯ್ಡೆನ್ಸ್ ಸಿಸ್ಟಮ್ ಹೊಂದಿದೆ.

ಪ್ರೀಮಿಯಂ ಕ್ಯಾಬಿನ್

ಮಹೀಂದ್ರಾ ವೀರೋ ಮೊದಲ ದರ್ಜೆಯ ಫೀಚರ್ ಗಳೊಂದಿಗೆ ಸಜ್ಜುಗೊಂಡಿದೆ. ಇದು ಚಾಲಕರಿಗೆ ಅತ್ಯುತ್ತಮ ಸೌಕರ್ಯ ಮತ್ತು ಅನುಕೂಲತೆ ಒದಗಿಸುತ್ತದೆ. ಇವುಗಳಲ್ಲಿ 26.03 ಸೆಂ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಪವರ್ ವಿಂಡೋಗಳು ಸೇರಿವೆ. ಇವೆಲ್ಲವೂ ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಮಹೀಂದ್ರಾ ವೀರೋ, ಹೀಟರ್ ಮತ್ತು ಡಿಮಿಸ್ಟರ್‌ ಜೊತೆಗೆ ಹವಾ ನಿಯಂತ್ರಣ ವ್ಯವಸ್ಥೆಯನ್ನೂ ಹೊಂದಿದೆ.