ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೈತ್ರಿ ಗಾಢವಾಗುವ ನಿಟ್ಟಿನಲ್ಲಿ ಸೋಮವಾರ “ಮೈತ್ರಿ ದಿನ’ ಎಂದು ಆಚರಿಸಲು ನಿರ್ಧರಿಸಲಾಗಿದೆ.
ಢಾಕಾ ಬಾಂಗ್ಲಾದೇಶದ ರಾಜಧಾನಿ ಎಂದು 1971ರ ಡಿ.6ರಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಂದಿನ ಸರಕಾರ ಮಾನ್ಯತೆ ನೀಡಿತ್ತು. ಅದರ ಸ್ಮರಣೆ ನಿಮಿತ್ತ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ನವದೆಹಲಿಯಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ ಸೋಮವಾರ ವಿಶೇಷ ಕಾರ್ಯ ಕ್ರಮ ಆಯೋಜಿಸಿದೆ.
1971ರಲ್ಲಿ ಭಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗಲು ಭಾರತ ಕಾರಣವಾಗಿದೆ. ಡಿ.6ಕ್ಕೆ ಸರಿಯಾಗಿ ಆ ಸಂಭ್ರಮಕ್ಕೆ 50 ವರ್ಷ ಭರ್ತಿ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿ.14 ರಿಂದ 16ರವರೆಗೆ ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಭರ್ಜರಿ ಕಾರ್ಯಕ್ರಮಗಳು ನಡೆಯಲಿವೆ.