Thursday, 21st November 2024

Nivin Pauly : ”ಪ್ರೇಮಂ” ಸಿನಿಮಾ ಖ್ಯಾತಿಯ ಮಲಯಾಳಂ ನಟ ನಿವಿನ್‌ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌

Nivin Pauly

ಬೆಂಗಳೂರು:  ಸೂಪರ್‌ ಹಿಟ್‌  ಮಲಯಾಳಂ ಸಿನಿಮಾ ”ಪ್ರೇಮಂ” ಖ್ಯಾತಿಯ ನಟ ನಿವಿನ್ ಪೌಲಿ (Nivin Pauly) ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. 2023 ರ ನವೆಂಬರ್ನಲ್ಲಿ ಚಲನಚಿತ್ರದಲ್ಲಿ ಪಾತ್ರ ನೀಡುವ ಸೋಗಿನಲ್ಲಿ ಪೌಲಿ ದುಬೈನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು  ನೆರಿಯಮಂಗಲಂ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಕೇರಳದ ಎರ್ನಾಕುಲಂನಲ್ಲಿ ಈ ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಲಾಗಿದ್ದು, ನಟ ಮತ್ತು ಇತರ ಐವರ ವಿರುದ್ಧ ಜಾಮೀನು ರಹಿತ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಒಟ್ಟು ಆರು ಆರೋಪಿಗಳಿದ್ದು ಇದು ಸಂಚಿನ ಕೃತ್ಯ ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಈ ಪ್ರಕರಣದಲ್ಲಿ ಆರು ಆರೋಪಿಗಳಿದ್ದು ಶ್ರೇಯಾ ಎಂಬುವರು ಮೊದಲ ಆರೋಪಿಯಾಗಿದ್ದಾರೆ. ನಿರ್ಮಾಪಕ ಎ.ಕೆ.ಸುನಿಲ್ ಮತ್ತು  ಬಿನು, ಬಶೀರ್, ಕುಟ್ಟನ್ ಮತ್ತು ನಿವಿನ್ ಪೌಲಿ ಆರೋಪಿಗಳಾಗಿದ್ದಾರೆ. ಸುನೀಲ್‌ ಆರನೇ ಆರೋಪಿಯಾಗಿದ್ದಾರೆ. ಯುರೋಪ್‌ನಲ್ಲಿ ಸುಶ್ರೂಷಕಿ ಕೆಲಸಕ್ಕೆ ಹುಡುಕುತ್ತಿದ್ದ ವೇಳೆ ವೇಳೆ ಶ್ರೇಯಾ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದೆ. ಅವರು ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದರು. ಕೆಲಸವು ಸಿಗದೇ ಹೋದಾಗ  ತನ್ನ ಹಣವನ್ನು ಮರಳಿ ಕೇಳಿದೆ. ಆ ಸಮಯದಲ್ಲಿ, ಶ್ರೇಯಾ ಚಲನಚಿತ್ರದಲ್ಲಿ  ಪಾತ್ರವೊಂದನ್ನು ನೀಡಿದರು ಎಂದು ಆರೋಪಿಸಲಾಗಿದೆ. ತನಗೆ  ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಲ್ಲಾ ಆರು ಆರೋಪಿಗಳು ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಕಳೆದ ನವೆಂಬರ್ ನಲ್ಲಿ ದುಬೈನಲ್ಲಿ ನಡೆದಿವೆ ಎಂದು ದೂರಿನಲ್ಲಿ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: RG KAR Hospital : ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೇಂದ್ರ ಸರ್ಕಾರ

ಚಲನಚಿತ್ರೋದ್ಯಮದಲ್ಲಿನ ಲೈಂಗಿಕ ದುರ್ನಡತೆಯ ಸಮಸ್ಯೆಗಳನ್ನು ಪರಿಹರಿಸುವ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸ್ಥಾಪಿಸಲಾದ ವಿಶೇಷ ತನಿಖಾ ತಂಡಕ್ಕೆ  (ಎಸ್ಐಟಿ)  ಮಹಿಳೆ ತನ್ನ ದೂರು ದಾಖಲಿಸಿದ್ದರು. ಎಸ್ಐಟಿ ಉನ್ನುಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಾಗಿದೆ. ನಿವಿನ್ ಪೌಲಿ ಮತ್ತು ಇತರ ಆರೋಪಿಗಳ ವಿರುದ್ಧದ ಆರೋಪಗಳು ಮನರಂಜನಾ ಉದ್ಯಮದಲ್ಲಿ ಗಮನಾರ್ಹ ಪರಿಣಾಮಗಳನ್ನು ಬೀರುವ ನಿರೀಕ್ಷೆಯಿದೆ.

ಹೇಮಾ ವರದಿಯ ನಂತರ, ಸೂಪರ್ಸ್ಟಾರ್ ಮೋಹನ್‌ಲಾಲ್‌ ಅವರು ಅಮ್ಮಾ (ಮಲಯಾಳಂ ಮೂವಿ ಆರ್ಟಿಸ್ಟ್ಸ್‌ ಅಸೋಸಿಯೇಷನ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ದೀಕ್ ಮತ್ತು ನಟ-ರಾಜಕಾರಣಿ ಮುಖೇಶ್ ಅವರಂತಹ ಸಂಘದ ಅನೇಕ ಸದಸ್ಯರ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪವಿದೆ. ಜಯಸೂರ್ಯ ಅವರಂತಹ ಜನಪ್ರಿಯ ನಟರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ.