Friday, 22nd November 2024

ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಪಟ್ಟ ಆಫರ್‌…!

ವದೆಹಲಿ: ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು, 135 ಸ್ಥಾನಗಳೊಂದಿಗೆ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಸಜ್ಜಾ ಗಿದೆ. ಆದರೆ ಸಿಎಂ ಆಯ್ಕೆಯೇ ಕಗ್ಗಂಟಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಮಲ್ಲಿಕಾ ರ್ಜುನ ಖರ್ಗೆಗೆ ಸಿಎಂ ಪಟ್ಟ  ಆಫರ್‌ ಮಾಡಿದ್ದಾರೆ.

ಕಾಂಗ್ರೆಸ್ ವರಿಷ್ಠರ ಪಡೆಯೇ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದ್ದು, ಸಿದ್ದರಾಮಯ್ಯ ಪರವಾಗಿ ರಾಹುಲ್ ಗಾಂಧಿ ಬ್ಯಾಟ್ ಬೀಸುತ್ತಿದ್ದಾರೆ. ಮತ್ತೊಂದ್ಕಡೆ ಡಿಕೆಶಿ ಪರ ಖರ್ಗೆ ಅವರಿಗೆ ಒಲವು ಇದೆ ಎನ್ನಲಾಗಿದೆ.

ನನಗೆ ಸಿಎಂ ಸ್ಥಾನ ಸಿಕ್ಕಿಲ್ಲ ಅಂದ್ರೆ ಸಿದ್ದರಾಮಯ್ಯ ಅವರಿಗೂ ಬೇಡ, ನಮ್ಮಿಬರ ಬದಲಾಗಿ ನೀವೇ ಸಿಎಂ ಆಗಿ ಎಂದು ಖರ್ಗೆಗೆ ಹೇಳಿದ್ದಾರಂತೆ ಡಿಕೆಶಿ. ಈ ವದಂತಿ ರಾಜ್ಯ ರಾಜಕೀಯ ದಲ್ಲಿ ಸಂಚಲನ ಸೃಷ್ಟಿಸಿದೆ.

ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ತಿಕ್ಕಾಟದಲ್ಲಿ ಎಲ್ಲಿ ಬಣ ರಾಜಕೀಯ ಶುರುವಾಗುತ್ತಾ? ಎಂಬ ಅನುಮಾನ ದಟ್ಟವಾಗಿದೆ. ಈ ನಡುವೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದ ಕೆಲವು ಮಾಜಿ ಸಚಿವರು ಟ್ವೀಟ್ ಮೂಲಕ ಕಾಂಗ್ರೆಸ್ ವಿಚಾರ ಪ್ರಸ್ತಾಪಿಸು ತ್ತಿದ್ದಾರೆ.

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಸಿದ್ದು ಸಿಎಂ ಆಗುವ ಬಗ್ಗೆ ಒಪ್ಪಿಗೆ ಇದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಡಿ.ಕೆ.ಶಿವಕುಮಾರ್ ಒಪ್ಪುತ್ತಿಲ್ಲ. ಚುನಾವಣೆಯಲ್ಲಿ ಪಕ್ಷ ಗೆಲ್ಲಲು ನಾನು ರಣತಂತ್ರ ರೂಪಿಸಿದ್ದೆ, ಹಾಗೇ ಪಕ್ಷದ ಗೆಲುವಿಗೆ ಹಗಲು-ರಾತ್ರಿ ದುಡಿದಿದ್ದೇನೆ. ಇಷ್ಟೆಲ್ಲಾ ಒತ್ತಡಗಳ ನಡುವೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷವನ್ನ ಗೆಲ್ಲಿಸಿ ತಂದಿರುವೆ, ಹೀಗಾಗಿ ನನಗೆ ಸಿಎಂ ಸ್ಥಾನ ಬೇಕು ಎನ್ನುತ್ತಿದ್ದಾರಂತೆ.

ಮುಂಬರುವ ಲೋಕಸಭಾ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಡೆ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಈ ಬಾರಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರೆ ಒಳ್ಳೆಯದಲ್ವಾ ಎಂಬ ಆಲೋಚನೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯದ್ದು.