Thursday, 12th December 2024

ಪ್ರಾಣ ಕೊಡಲು ಸಿದ್ಧ, ದೇಶ ವಿಭಜನೆಗೆ ಅವಕಾಶ ನೀಡಲ್ಲ: ಮಮತಾ ಶಪಥ

ಕೋಲ್ಕತ್ತ: ದ್ವೇಷದ ರಾಜಕಾರಣ ಮಾಡುವ ಮೂಲಕ ಕೆಲವರು ರಾಷ್ಟ್ರವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾನು ಪ್ರಾಣ ಕೊಡಲು ಸಿದ್ಧನಿದ್ದೇನೆ, ಆದರೆ ದೇಶ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ನಗರದ ರೆಡ್ ರೋಡ್‍ನಲ್ಲಿ ನಡೆದ ಈದ್ ನಮಾಜ್ ಸಭೆಯಲ್ಲಿ ಮಾತನಾಡಿ, 2024 ರ ಲೋಕಸಭಾ ಚುನಾವಣೆ ಯಲ್ಲಿ ಬಲಪಂಥೀಯ ಬಿಜೆಪಿ ಪಕ್ಷವನ್ನು ಸೋಲಿಸುವುದನ್ನು ಖಚಿತಪಡಿಸಿಕೊಳ್ಳಲು ಜನರು ಒಂದಾಗಬೇಕು ಎಂದು ಕರೆ ನೀಡಿದರು.

ಕೆಲವರು ದೇಶವನ್ನು ವಿಭಜಿಸಲು ಮತ್ತು ದ್ವೇಷದ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾನು ಪ್ರಾಣ ಕೊಡಲು ಸಿದ್ಧನಿದ್ದೇನೆ ಆದರೆ ದೇಶ ವಿಭಜನೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಎನ್‍ಆರ್‍ಸಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ಪೌರತ್ವ ಹಕ್ಕುಗಳನ್ನು ನೀಡುವ ನಾಗರಿಕರ ತಿದ್ದುಪಡಿ ಕಾಯಿದೆಯ ಅಗತ್ಯವಿದೆ ಮತ್ತು ಅಸ್ತಿತ್ವದಲ್ಲಿರುವ ಪೌರತ್ವ ದಾಖಲೆಗಳು ಮತ್ತು ಕಾಯಿದೆಗಳು ಸಾಕಾಗುತ್ತದೆ ಎಂದರು.