Friday, 22nd November 2024

Zakir Naik : ಹೈದರಾಬಾದ್‌ನಲ್ಲಿ ದುರ್ಗೆ ಮೂರ್ತಿ ಧ್ವಂಸಗೊಳಿಸಿದ ವ್ಯಕ್ತಿಗೆ ದ್ವೇಷ ಬೋಧಕ ಜಾಕಿರ್ ನಾಯ್ಕ್ ವೀಡಿಯೊಗಳೇ ಪ್ರೇರಣೆ!

ಹೈದರಾಬಾದ್: ಅಕ್ಟೋಬರ್ 14ರಂದು ಹೈದರಾಬಾದ್‌ನ ದೇವಾಲಯದಲ್ಲಿ ವಿಗ್ರಹ ಅಪವಿತ್ರಗೊಳಿಸಿದ ಆರೋಪದ ಮೇಲೆ 30 ವರ್ಷದ ಎಂಜಿನಿಯರಿಂಗ್ ಪದವೀಧರ ಸಲ್ಮಾನ್ ಸಲೀಂ ಠಾಕೂರ್ ಸೆರೆಯಾಗಿದ್ದ. ಆತನಿಗೆ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ (Zakir Naik) ಮತ್ತು ಇತರರ ವೀಡಿಯೊಗಳೇ ಕುಕೃತ್ಯಕ್ಕೆ ಪ್ರೇರಣೆ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ.

ಆರೋಪಿ ಸಲ್ಮಾನ್‌, ಜಾಕಿರ್‌ನ ಸಾಮಾಜಿಕ ಮಾಧ್ಯಮದಲ್ಲಿ ನೋಡುವ ಮೂಲಕ ಸ್ವಯಂ ತೀವ್ರಗಾಮಿಯಾಗಿದ್ದ. ಈ ಹಿಂದೆ ಮುಂಬೈನಲ್ಲಿ ಇದೇ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದನು ಎಂದು ಹೈದರಾಬಾದ್ ಪೊಲೀಸರು ಬುಧವಾರ ತಿಳಿಸಿದ್ದಾರೆ. ಸಲ್ಮಾನ್ ಸಲೀಂ ಠಾಕೂರ್ ಅಲಿಯಾಸ್ ಸಲ್ಮಾನ್ ಸೋಮವಾರ ಮುಂಜಾನೆ ಸಿಕಂದರಾಬಾದ್‌ನ ಮುತ್ಯಾಲಮ್ಮ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ ದೇವಾಲಯದ ಮುಖ್ಯ ವಿಗ್ರಹವನ್ನು ಅಪವಿತ್ರಗೊಳಿಸಿದ್ದ. ಇದು ಸ್ಥಳೀಯ ಜನರು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿಯಿಂದ ಪ್ರತಿಭಟನೆಗೆ ಕಾರಣವಾಗಿದೆ.

ಕಿಡಿಗೇಡಿತನಕ್ಕೆ ಕೋಪಗೊಂಡ ಕೋಪಗೊಂಡ ಕೆಲವು ಸ್ಥಳೀಯ ನಿವಾಸಿಗಳು ಆರೋಪಿಯನ್ನು ಥಳಿಸಿದ್ದರು. ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ಆರೋಪಿಯು ಆಂತರಿಕ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಮುಂಬಯಿ ಮೂಲದ ಆರೋಪಿ

ಮುಂಬೈ ಮೂಲದ ಸಲ್ಮಾನ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಜಾಕಿರ್ ನಾಯ್ಕ್ ಅವರಂತಹ ಇಸ್ಲಾಮಿಕ್ ಬೋಧಕರ ವೀಡಿಯೊಗಳನ್ನು ವೀಕ್ಷಿಸಲು ಪ್ರಾರಂಭಿಸಿದದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಹೈದರಾಬಾದ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ. ಮೊಬೈಲ್ ಫೋನ್ ಮತ್ತು ಅವರ ಸಾಮಾಜಿಕ ಮಾಧ್ಯಮ ವಿಶ್ಲೇಷಿಸಿದ ನಂತರ ನಮಗೆ ಮಾಹಿತಿ ಸಿಕ್ಕಿತು (ನಾಯಕ್ ಮತ್ತು ಇತರ ಇಸ್ಲಾಮಿಕ್ ಬೋಧಕರ ವೀಡಿಯೊಗಳನ್ನು ನೋಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Zakir Naik: ವೇದಿಕೆಯಲ್ಲೇ ಜಾಕಿರ್‌ ನಾಯ್ಕ್‌ ಬೆವರಿಳಿಸಿದ ಯುವತಿ; ಇಲ್ಲಿದೆ ವಿಡಿಯೋ

ಆತ “ಸ್ವಯಂ-ತೀವ್ರಗಾಮಿಯಾಗಿದ್ದು, ವಿಗ್ರಹಾರಾಧನೆಯಂತಹ ಇತರ ಧರ್ಮಗಳ ಆಚರಣೆಗಳ ಬಗ್ಗೆ ಕೆಟ್ಟ ಮನಸ್ಥಿತಿ ಮತ್ತು ದ್ವೇಷ ಬೆಳೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮುಂಬೈನಲ್ಲಿ ವಿಗ್ರಹಗಳಿಗೆ ಹಾನಿ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಈ ಹಿಂದೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ತಿಂಗಳ ಆರಂಭದಲ್ಲಿ ಸಲ್ಮಾನ್ ಒಂದು ತಿಂಗಳ ಕಾಲ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಭಾಗವಹಿಸಲು ಹೈದರಾದ್‌ಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.