Thursday, 12th December 2024

ಮಂಡಲ್ ಬಿಜೆಪಿಯ ಉಪಾಧ್ಯಕ್ಷ ಮುಖಂಡ ಡಿ.ಕೆ.ಗುಪ್ತಾ ಹತ್ಯೆ

ಲಕ್ನೋ: ಬಿಜೆಪಿಯ ಮುಖಂಡ ಡಿ.ಕೆ.ಗುಪ್ತಾ ಅವರನ್ನು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾ ಗಿದೆ.

ಶುಕ್ರವಾರ ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಪ್ತಾ ಅವರ ಮೇಲೆ ಗುಂಡಿನ ಸುರಿಮಳೆಗರೆದಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಗುಪ್ತಾ ಫಿರೋಜಾಬಾದ್ ಮಂಡಲ್ (ವಾರ್ಡ್) ಬಿಜೆಪಿಯ ಉಪಾಧ್ಯಕ್ಷರಾಗಿದ್ದರು.

ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಶುಕ್ರವಾರ ಹಗಲಿನ ವೇಳೆ ತುಂಡ್ಲಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ತೆರಳಿದ್ದರು. ತುಂಡ್ಲಾ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪ ಚುನಾ ವಣೆ ನಿಗದಿಯಾಗಿದೆ.

ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲಿ ಅವರು ದಿನಸಿ ಅಂಗಡಿಯೊಂದರಲ್ಲಿ ಇದ್ದರು. ಗಾಯಗೊಂಡಿದ್ದ ಗುಪ್ತಾ ಅವರನ್ನು ಆಗ್ರಾದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಆಗಲೇ ಮೃತಟಪಟ್ಟಿದ್ದಾರೆ ಎಂದು ಘೋಷಿಸಲಾಯಿತು.