Sunday, 15th December 2024

ಮಂಡಿ ಜಿಲ್ಲೆಯಲ್ಲಿ 2.8ರಷ್ಟು ಲಘು ಭೂಕಂಪ

ಮಂಡಿ : ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 2.8ರಷ್ಟು ಲಘು ಭೂಕಂಪ ಸಂಭವಿಸಿದೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 4:52 ಕ್ಕೆ ಭೂಮೇಲ್ಮೈಯಿಂದ 4 ಕಿಮೀ ಆಳದಲ್ಲಿ2.8ರಷ್ಟು ಲಘು ಭೂಕಂಪ ಸಂಭವಿಸಿದೆ ಎಂದು ಐಎಂಡಿ ತಿಳಿಸಿದೆ.

ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ.