Sunday, 8th September 2024

ಹಿಂದಿ ಕವಿ, ಪತ್ರಕರ್ತ ಮಂಗಲೇಶ್ ದರ್ಬಾಲ್ ಇನ್ನಿಲ್ಲ

ನವದೆಹಲಿ: ಹಿಂದಿ ಕವಿ, ಪತ್ರಕರ್ತ ಮಂಗಲೇಶ್ ದರ್ಬಾಲ್(72) ಕೋವಿಡ್-19 ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಮೃತ ಪಟ್ಟಿದ್ದಾರೆ.

ಝಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೇಹಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಎಐಐಎಂಎಸ್‌ಗೆ ವರ್ಗಾಯಿಸಲಾಗಿತ್ತು. ಬುಧವಾರ ಸಂಜೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಎರಡು ಬಾರಿ ಹೃದಯಾಘಾತಕ್ಕೆ ಒಳಗಾದರು” ಎಂದು ಅವರ ಸ್ನೇಹಿತ ಸಂಜಯ್ ಜೋಶಿ ಹೇಳಿದ್ದಾರೆ.

“ಸಂಜೆ 5ರ ಸುಮಾರಿಗೆ ದರ್ಬಾಲ್ ಅವರನ್ನು ಡಯಾಲಿಸಿಸ್‌ಗೆ ಕರೆದೊಯ್ಯಲಾಗುತ್ತಿತ್ತು. ಆಗ ಎರಡು ಬಾರಿ ಹೃದಯಾಘಾತ ಕ್ಕೀಡಾದರು. ಅವರು ಸಿಪಿಆರ್ ಮೂಲಕ ಪ್ರಯತ್ನಿಸುತ್ತಿದ್ದಾರೆ” ಎಂದು ಮತ್ತೊಬ್ಬ ಕವಿ, ಸ್ನೇಹಿತ ಅಸಾದ್ ಝೈದಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.

ಉತ್ತರಾಖಂಡದ ತೆಹ್ರಿ ಗರ್ವಾಲ್‌ನಲ್ಲಿ 1948ರಲ್ಲಿ ಜನಿಸಿದ ದರ್ಬಾಲ್, ಜನಸತ್ತಾ ಮತ್ತು ಪ್ರತಿಪಕ್ಷ ಸೇರಿದಂತೆ ಹಲವು ಪತ್ರಿಕೆ ಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ನ್ಯಾಷನಲ್ ಬುಕ್ ಟ್ರಸ್ಟ್‌ನ ಸಂಪಾದಕೀಯ ಸಲಹೆಗಾರರಾಗಿಯೂ ಅವರು ಕಾರ್ಯ ನಿರ್ವಹಿಸಿ ದ್ದರು. ಐದು ಕವನ ಸಂಲಕನ ಹಾಗೂ ಎರಡು ಗದ್ಯ ಸಂಕಲನಗಳನ್ನು ಅವರು ಹೊರತಂದಿದ್ದರು.

ಹಿಂದಿ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿತ್ತು.

Leave a Reply

Your email address will not be published. Required fields are marked *

error: Content is protected !!