Friday, 22nd November 2024

ಮಣಿಪುರ ಶಾಸಕರು ಬಿಜೆಪಿ ಸೇರ್ಪಡೆ

ನವದೆಹಲಿ: ಸೋಮವಾರ ಮಣಿಪುರದ ಇಬ್ಬರು ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರಾಜ್‌ಕುಮಾರ್ ಇಮೊ ಸಿಂಗ್‌ ಮತ್ತು ಕಾಂಗ್ರೆಸ್‌ ಶಾಸಕ ಯಮ್‌ಥಾಂಗ್‌ ಹಾಕಿಪ್‌, ಕೇಂದ್ರ ಸಚಿವ ಸರ್ವಾನಂದ ಸೋನಾವಾಲ್ ಮತ್ತು ಮಣಿಪುರದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಸಂಬಿತ್‌ ಪಾತ್ರ ನೇತೃತ್ವ ದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ರಾಜ್‌ಕುಮಾರ್ ಕೂಡ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆ ಯಲ್ಲಿ ಪಕ್ಷ ಅವರನ್ನು ಅಮಾನತುಗೊಳಿಸಿತ್ತು. ಇಮೊ ಸಿಂಗ್ ಅವರ ತಂದೆ ರಾಜ್‌ಕುಮಾರ್ ಜೈಚಂದ್ರ ಸಿಂಗ್‌ ಮಣಿಪುರದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.