Friday, 20th September 2024

Manipur Violence : ದೊಂಬಿ ಎಬ್ಬಿಸಲು ಮ್ಯಾನ್ಮಾರ್‌ನಿಂದ ಬಂದಿದ್ದಾರೆ 900 ಕುಕಿ ಉಗ್ರರು; ಮಣಿಪುರ ಸರ್ಕಾರದ ಎಚ್ಚರಿಕೆ

ಇಂಫಾಲ್ : ನೆರೆಯ ದೇಶ ಮ್ಯಾನ್ಮಾರ್‌ನಲ್ಲಿ ತರಬೇತಿ ಪಡೆದು ಮಣಿಪುರಕ್ಕೆ ಕಾಡಿನ ಮೂಲಕ ಬರುತ್ತಿರುವ ಕುಕಿ ಉಗ್ರರು ಮಣಿಪುರದಲ್ಲಿ ಗಲಭೆಗೆ (Manipur Violence) ಕಾರಣರಾಗುತ್ತಿದ್ದಾರೆ ಎಂದು ಮಣಿಪುರ ಸರ್ಕಾರ ಹೇಳಿದೆ. ಈ ಮೂಲಕ ಗುಪ್ತಚರ ವರದಿಯನ್ನು ಆಧರಿಸಿ ಮೊದಲ ಬಾರಿಗೆ ಇಂಥ ಹೇಳಿಕೆ ನೀಡಿದೆ. ಯುದ್ಧ ಮತ್ತು ಶಸ್ತ್ರಸಜ್ಜಿತ ಡ್ರೋನ್ ಗಳ ಬಳಕೆಯಲ್ಲಿ ತರಬೇತಿ ಪಡೆದ 900 ಕುಕಿ ಉಗ್ರರು ಪ್ರವೇಶಿಸಿರುವ ಬಗ್ಗೆ ಗುಪ್ತಚರ ವರದಿ ಬಂದಿದೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ದೃಢಪಡಿಸಿದ್ದಾರೆ. ವರದಿಯನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮಣಿಪುರ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುಪ್ತಚರ ವರದಿಯನ್ನು ದಕ್ಷಿಣ ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯ ಜಿಲ್ಲೆಗಳ ಎಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಲಾಗಿದೆ/ ಡ್ರೋನ್ ಆಧಾರಿತ ಬಾಂಬ್‌ಗಳು. ಕ್ಷಿಪಣಿಗಳು ಮತ್ತು ಕಾಡಿನ ಯುದ್ಧದ ಬಳಕೆಯಲ್ಲಿ ಹೊಸದಾಗಿ ತರಬೇತಿ ಪಡೆದ 900 ಕುಕಿ ಉಗ್ರರು ಮ್ಯಾನ್ಮಾರ್‌ನಿಂದ ಮಣಿಪುರ ನ್ನು ಪ್ರವೇಶಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

“ಕುಕಿ ಉಗ್ರಗಾಮಿಗಳು” ತಲಾ 30 ಸದಸ್ಯರ ಘಟಕಗಳಾಗಿ ಗುಂಪುಗಳಾಗಿದ್ದಾರೆ ಎಂದು ನಂಬಲಾಗಿದೆ/ ಪ್ರಸ್ತುತ ಅವರು ಗಡಿಯಂಚಿನಲ್ಲಿ ಚದುರಿಹೋಗಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅವರು ಮೈತಿಗಳು ಇರುವ ಗ್ರಾಮಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಬಹುದು ಎಂದು ಹೇಳಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ವರದಿಯು “ಶೇಕಡಾ 100 ರಷ್ಟು ಸರಿಯಾಗಿದೆ” ಎಂದು ಹೇಳಿದ್ದಾರೆ. “ಇದು ತಪ್ಪು ಎಂದು ಸಾಬೀತಾಗದ ಹೊರತು, ಅದು ಶೇಕಡಾ 100 ರಷ್ಟು ಸರಿಯಾಗಿದೆ ಎಂದು ನಾವು ನಂಬುತ್ತೇವೆ. ಏಕೆಂದರೆ ಯಾವುದೇ ಗುಪ್ತಚರ ಮಾಹಿತಿಯನ್ನು ನೀವು ಶೇಕಡಾ 100 ರಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಸಿದ್ಧರಾಗಬೇಕು” ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: Tirupati laddu row : ತಿರುಪತಿ ಲಡ್ಡು ತಯಾರಿಸಲು ನಾವು ತುಪ್ಪ ಕೊಟ್ಟಿಲ್ಲ; ಅಮೂಲ್‌ ಸ್ಪಷ್ಟನೆ

ಮ್ಯಾನ್ಮಾರ್‌ನ ಚಿನ್ ರಾಜ್ಯ ಮತ್ತು ಇತರ ರಾಜ್ಯಗಳಲ್ಲಿನ ಜನಾಂಗೀಯ ಸಶಸ್ತ್ರ ಗುಂಪುಗಗಳಿವೆ. ಅವುಗಳಲ್ಲಿ ಜುಂಟಾ ಜುಂಟಾ ಪಡೆಗಳು ಭಾರತಕ್ಕೆ ಪಲಾಯನ ಮಾಡಿವೆ. ಚಿನ್ ರಾಜ್ಯ ಮತ್ತು ಸಾಗಿಂಗ್ ಪ್ರದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣ ಮಣಿಪುರದಲ್ಲಿ ಅಕ್ರಮ ವಲಸಿಗರ ಜನಸಂಖ್ಯೆಯಲ್ಲಿನ ಭಾರಿ ಏರಿಕೆಯ ನೇರ ಪರಿಣಾಮವಾಗಿ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ನಡೆದಿದೆ ಎಂದು ಮಣಿಪುರ ಸರ್ಕಾರ ದೀರ್ಘಕಾಲದಿಂದ ಸಮರ್ಥಿಸಿಕೊಂಡಿದೆ.

ಜನವರಿಯಲ್ಲಿ, ಮಣಿಪುರದ ಗಡಿ ವ್ಯಾಪಾರ ಪಟ್ಟಣ ಮೋರೆಹ್‌ನಲ್ಲಿ ಪೊಲೀಸ್ ಕಮಾಂಡೋಗಳ ಮೇಲಿನ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಭದ್ರತಾ ಸಲಹೆಗಾರ ಮ್ಯಾನ್ಮಾರ್ ಮೂಲದ ಭಯೋತ್ಪಾದಕರು ಭಾಗಿಯಾಗಿರುವುದನ್ನು ನಿರಾಕರಿಸಿದ್ದರು.