Saturday, 14th December 2024

ಮಣಿಪುರ ಸಚಿವರ ಖಾಸಗಿ ಗೋಡೌನಿಗೆ ಬೆಂಕಿ ಹಚ್ಚಿ ಧ್ವಂಸ

ಇಂಫಾಲ್(ಮಣಿಪುರ): ಇಂಫಾಲ್ ಪೂರ್ವ ಜಿಲ್ಲೆಯ ಚಿಂಗಾರೆಲ್ನಲ್ಲಿ ಮಣಿಪುರ ಸಚಿವ ಎಲ್ ಸುಸಿಂದ್ರೋ ಅವರ ಖಾಸಗಿ ಗೋಡೌನಿಗೆ ದುಷ್ಕರ್ಮಿಗಳ ಗುಂಪೊಂದು ಶನಿವಾರ ಬೆಂಕಿ ಹಚ್ಚಿ ಧ್ವಂಸ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಅದೇ ಜಿಲ್ಲೆಯ ಖುರೈನಲ್ಲಿರುವ ಗ್ರಾಹಕ ಮತ್ತು ಆಹಾರ ವ್ಯವಹಾರಗಳ ಸಚಿವರಾಗಿರುವ ಸುಸಿಂದ್ರೊ ಅವರ ಮತ್ತೊಂದು ಆಸ್ತಿ ಮತ್ತು ಅವರ ನಿವಾಸಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಲಾಯಿತಾದರೂ ಯಶಸ್ವಿಯಾಗಿರಲಿಲ್ಲ. ಸಚಿವರ ಖುರೈ ನಿವಾಸವನ್ನು ಘೇರಾವ್ ಮಾಡುವು ದನ್ನು ತಡೆಯಲು ಭದ್ರತಾ ಪಡೆಗಳು ಮಧ್ಯರಾತ್ರಿಯವರೆಗೆ ಹಲವಾರು ಸುತ್ತಿನ ಅಶ್ರುವಾಯು ಸಿಡಿಮದ್ದುಗಳನ್ನು ಹಾರಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ ಪ್ರದೇಶದಲ್ಲಿ ಸಚಿವೆ ನೆಮ್ಚಾ ಕಿಪ್ಗೆನ್ ಅವರ ಅಧಿಕೃತ ಕ್ವಾರ್ಟರ್ಸ್ಗೆ ಜೂನ್ 14 ರ ರಾತ್ರಿ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದರು.

ಮಣಿಪುರದಲ್ಲಿ ಮೈಟೆಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾ ಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿ ದ್ದಾರೆ. ಅನೇಕ ಮನೆಗಳನ್ನು ಸುಟ್ಟುಹಾಕಲಾಗಿದೆ.

ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಹತ್ತಿಕ್ಕಲು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ಹಿನ್ನೆಲೆಯಲ್ಲಿ ಮೇ 3ರಂದು ತೀವ್ರ ಸಂಘರ್ಷ ಏರ್ಪಟ್ಟು ಮಣಿಪುರದಲ್ಲಿ ಹಿಂಸಾಚಾರ ರೂಪ ತಾಳಿತು.