Monday, 14th October 2024

ಮಣಿಪುರ ಪ್ರಕರಣ: ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆ ಮುಂದುವರಿದಿದ್ದು, ಲೋಕಸಭೆ ಕಲಾ ಪಕ್ಕೆ ಗುರುವಾರವೂ ಅಡ್ಡಿಯುಂಟಾಯಿತು.

ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಕಲಾಪಕ್ಕೆ ಉಂಟಾಗು ತ್ತಿರುವ ಪುನರಾವರ್ತಿತ ಅಡ್ಡಿಗಳಿಂದ ಅಸಮಾಧಾನಗೊಂಡ ಸ್ಪೀಕರ್ ಓಂ ಬಿರ್ಲಾ ಅವರು ಸತತ ಎರಡನೇ ಬಾರಿಗೆ ಗುರುವಾರ ಪ್ರಶ್ನೋತ್ತರ ಅವಧಿಯ ವೇಳೆ ಸದನ ದಲ್ಲಿ ಕಲಾಪದ ಅಧ್ಯಕ್ಷತೆ ವಹಿಸಲಿಲ್ಲ. ಮಣಿಪುರ ವಿಷಯವಾಗಿ ವಿರೋಧ ಪಕ್ಷದ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದು ವರೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗುತ್ತಾ ಫಲಕಗಳನ್ನು ಪ್ರದರ್ಶಿಸಿದರು.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ಸ್ಪೀಕರ್ ಸದನಕ್ಕೆ ಬರಬೇಕೆಂದು ನಾವು ಬಯಸುತ್ತೇವೆ. ಅವರು ‘ನಮ್ಮ ಉಸ್ತುವಾರಿ’ ಎಂದು ಹೇಳಿದರು.