ಆದರೆ ಸಮನ್ಸ್ ನೀಡಿರುವುದನ್ನು ಮನೀಶ್ ಸಿಸೋಡಿಯಾ ಅವರು ಸಮನ್ಸ್ ಅನ್ನು ಗುಜರಾತ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಲಿಂಕ್ ಮಾಡಿದ್ದಾರೆ.
ʻಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಬೇಕಾಗಿತ್ತು. ನಾನು ಗುಜರಾತ್‌ಗೆ ಹೋಗುವುದನ್ನು ತಡೆಯುವುದು ಅವರ ಉದ್ದೇಶವಾಗಿದೆ. ಗುಜರಾತ್‌ನಲ್ಲಿ ಸೋಲುತ್ತಿದೆ ಎಂದು ಬಿಜೆಪಿಗೆ ಗೊತ್ತಿರುವುದರಿಂದಲೇ ಅವರು ಕಂಗಾಲಾಗಿದ್ದಾರೆ ಎಂದು ಸಿಸೋಡಿಯಾ ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಸಿಸೋಡಿಯಾ ಅವರು ಟ್ವೀಟ್ ಮಾಡಿದ ವೀಡಿಯೊದಲ್ಲಿ, ಸಿಬಿಐ ಕಚೇರಿಗೆ ಹೊರಡುವ ಮೊದಲು ಅವರ ಆಶೀರ್ವಾದ ಪಡೆಯಲು ಅವರ ತಾಯಿಯ ಪಾದಗಳನ್ನು ಸ್ಪರ್ಶಿಸು ತ್ತಿರುವುದು ಕಂಡುಬಂದಿದೆ.