Saturday, 23rd November 2024

ಮದ್ಯ ನೀತಿ ಪ್ರಕರಣ: ವಿಚಾರಣೆಗೆ ಕಾಲಾವಕಾಶ ಕೋರಿದ ಸಿಸೋಡಿಯಾ

ನವದೆಹಲಿ: ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಭಾನುವಾರ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಕೇಂದ್ರ ತನಿಖಾ ದಳಕ್ಕೆ ಒಂದು ವಾರ ಕಾಲಾವಕಾಶ ಕೋರಿದ್ದಾರೆ.

ಸಿಸೋಡಿಯಾ ಹಾಗೂ ಇತರರು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದು ವಿಚಾರಣೆಗೆ ಹಾಜರಾಗಲು ಸಿಬಿಐ ಸಮನ್ಸ್ ನೀಡಿದೆ. ದಿಲ್ಲಿ ಹಣಕಾಸು ಸಚಿವರೂ ಆಗಿರುವ ಸಿಸೋಡಿಯಾ ಅವರು 2024 ರ ಹಣಕಾಸು ವರ್ಷದ ರಾಷ್ಟ್ರ ರಾಜಧಾನಿಯ ಬಜೆಟ್ ಅನ್ನು ಸಿದ್ಧಪಡಿಸುತ್ತಿರುವುದರಿಂದ ಸಿಬಿಐ ಕಚೇರಿಗೆ ಹೋಗಲು ಕನಿಷ್ಠ ಒಂದು ವಾರ ಬೇಕು ಎಂದಿದ್ದಾರೆ.

ತಾನು ಸಿಬಿಐಗೆ “ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದು ಸುದ್ದಿಗಾರರಿಗೆ ಸಿಸೋಡಿಯಾ ತಿಳಿಸಿದರು.

“ಬಜೆಟ್ ಒಂದು ನೆಪವಷ್ಟೇ, ತಪ್ಪಿಸಿಕೊಳ್ಳುವುದೇ ಅವರ ನಿಜವಾದ ಉದ್ದೇಶ. ನಿನ್ನೆಯವರೆಗೂ ಯಾವುದೇ ಹಗರಣವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಇಂದಿನ ಅವರ ವರ್ತನೆ ಅವರು ಭಯಭೀತರಾಗಿರುವುದನ್ನು ಸೂಚಿಸುತ್ತದೆ. ಅವರು ಕಠಿಣ ಪ್ರಶ್ನೆಗಳಿಗೆ ಹೆದರು ತ್ತಾರೆಯೇ?”ಎಂದು ದಿಲ್ಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.