Thursday, 12th December 2024

ಸಿಸೋಡಿಯಾಗೆ ಸಿಬಿಐ ಕಸ್ಟಡಿ ಐದು ದಿನಗಳವರೆಗೆ ವಿಸ್ತರಣೆ

ವದೆಹಲಿ : ಮದ್ಯ ನೀತಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಿಬಿಐ ಕಸ್ಟಡಿಯನ್ನ ಫೆ.27 ರಂದು ಐದು ದಿನಗಳವರೆಗೆ ವಿಸ್ತರಿಸಲಾಗಿದೆ.

ಇದಕ್ಕೂ ಮೊದಲು ಸಿಸೋಡಿಯಾ ಅವರ ವಕೀಲರು ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದಾಗ್ಯೂ, ಪ್ರಕರಣದ ಪರಿಣಾಮಕಾರಿ ವಿಚಾರಣೆಗಾಗಿ ದೆಹಲಿ ಉಪಮುಖ್ಯಮಂತ್ರಿಯ ಐದು ದಿನಗಳ ಕಸ್ಟಡಿ ಅಗತ್ಯವಿದೆ ಎಂದು ಸಿಬಿಐ  ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಎಂಟು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಫೆ.26 ರಂದು ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಈ ಮಧ್ಯೆ ಸಿಸೋಡಿಯಾ ವಿರುದ್ಧದ ತನಿಖೆಯನ್ನ ‘ರಾಜಕೀಯ ದುರುದ್ದೇಶದಿಂದ ನಡೆಸಲಾಗಿದೆ’ ಮತ್ತು ಸಿಬಿಐ ‘ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದೆ’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.