Thursday, 12th December 2024

ಮನೀಶ್ ಸಿಸೋಡಿಯಾ ’ಇಡಿ’ ಕಸ್ಟಡಿ ಐದು ದಿನ ವಿಸ್ತರಣೆ

ವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿ ಯನ್ನ ದೆಹಲಿ ನ್ಯಾಯಾಲಯ ಶುಕ್ರವಾರ ಇನ್ನೂ ಐದು ದಿನಗಳವರೆಗೆ ವಿಸ್ತರಿಸಿದೆ.

ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್ ಅವರು ಸಿಸೋಡಿಯಾ ಪರ ಹಾಜರಾದ ಇಡಿ ವಕೀಲ ಜೊಹೆಬ್ ಹುಸೇನ್ ಮತ್ತು ಹಿರಿಯ ವಕೀಲರಾದ ಮೋಹಿತ್ ಮಾಥುರ್ ಮತ್ತು ಸಿದ್ಧಾರ್ಥ್ ಅಗ ರ್ವಾಲ್ ಅವರ ವಾದವನ್ನು ಆಲಿಸಿದ ನಂತರ ಈ ಆದೇಶವನ್ನು ಪ್ರಕಟಿಸಿದರು.

ಮಾ.22ರಂದು ಸಿಸೋಡಿಯಾ ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಧೀಶರು ಏಜೆನ್ಸಿಯನ್ನ ಕೇಳಿದರು.

ಏಳು ದಿನಗಳ ಇಡಿ ಕಸ್ಟಡಿ ಮುಗಿದ ನಂತರ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವಿಷಯದಲ್ಲಿ ವಿಚಾರಣೆ ನಡೆಸಲು ಎಎಪಿ ನಾಯಕನನ್ನ ಇನ್ನೂ ಏಳು ದಿನಗಳ ಕಸ್ಟಡಿಗೆ ನೀಡುವಂತೆ ಏಜೆನ್ಸಿ ಇಂದು ಕೋರಿದೆ. ಸಿಬಿಐ ಪ್ರಕರಣದಲ್ಲಿ ಸಿಸೋ ಡಿಯಾ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.