Thursday, 12th December 2024

ಪಂಜಾಬ್: ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮನ್ ಫೈನಲ್‌

ಮೊಹಾಲಿ: ಪಂಜಾಬ್ ನ ಸಂಗ್ರೂರು ಕ್ಷೇತ್ರದ ಆಮ್ ಆದ್ಮಿ ಪಕ್ಷದ ಲೋಕಸಭಾ ಸದಸ್ಯ ಭಗವಂತ್ ಮನ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದಾರೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಮಂಗಳವಾರ ಚಂಡೀಗಢದಲ್ಲಿ ಈ ಘೋಷಣೆ ಮಾಡಿದ ಅವರು, ಪಕ್ಷವು ಫೋನ್ ಲೈನ್ ಅನ್ನು ತೆರೆದು ಅಭ್ಯರ್ಥಿಯ ಆಯ್ಕೆಯನ್ನು ನೀಡುವಂತೆ ಜನರನ್ನು ಕೇಳಿಕೊಂಡಿದ್ದವು. ಫಲಿತಾಂಶದಂತೆ ಭಗವಂತ್ ಮನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ತೀರ್ಮಾನಿಸಿದ್ದೇವೆ ಎಂದು ಪ್ರಕಟಿಸಿದರು.