Thursday, 19th September 2024

ಚಂಡೀಗಢ ವಿಮಾನ ನಿಲ್ದಾಣಕ್ಕೆ ಮರುನಾಮಕರಣ: ನರೇಂದ್ರ ಮೋದಿ

ವದೆಹಲಿ: ಚಂಡೀಗಢ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ  “ಮನ್ ಕಿ ಬಾತ್” ನಲ್ಲಿ ಘೋಷಿಸಿದರು.

ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವವಾಗಿ, ಚಂಡೀಗಢ ವಿಮಾನ ನಿಲ್ದಾಣಕ್ಕೆ ಈಗ ಹುತಾತ್ಮ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಪ್ರಮಾಣವಚನವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ಸಾಂಕೇತಿಕ ಗೌರವ ಸಲ್ಲಿಸುವ ಮೂಲಕ ತೆಗೆದುಕೊಂಡಿದ್ದರು.

ಕ್ರಾಂತಿಯ ಸಂಕೇತವಾಗಿ ಭಗತ್ ಸಿಂಗ್ ಅವರು ಬಸಂತಿ ಪೇಟಗಳನ್ನು ಧರಿಸುತ್ತಿದ್ದರು. ಭಗವಂತ್ ಮಾನ್ ಅವರ ಟ್ರೇಡ್‌ಮಾರ್ಕ್ ಹಳದಿ ಪೇಟ. ಹೀಗಾಗಿ ಅವರ ಪ್ರಮಾಣಕ್ಕೆ “ಬಸಂತಿ ಪೇಟ ಮತ್ತು ದುಪಟ್ಟಾ” ಧರಿಸಲು ಜನರಿಗೆ ನೀಡಿದ ಕರೆಗೆ ಪ್ರತಿಯಾಗಿ ಹಳ್ಳಿಯೇ ಹಳದಿ ಬಣ್ಣದಲ್ಲಿ ಮುಳುಗಿತ್ತು.

ಬಿಜೆಪಿ ನೇತೃತ್ವದ ಹರಿಯಾಣ ವಿಧಾನಸಭೆಯು 2016ರ ಏಪ್ರಿಲ್‌ನಲ್ಲಿ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿತ್ತು.

ಸೆ.28 ರಂದು ಶಹೀದ್ ಭಗತ್ ಸಿಂಗ್ ಜನ್ಮದಿನವಿದೆ. ಇದರ ಬೆನ್ನಲ್ಲೆ ಪ್ರಧಾನಿ ಮೋದಿ ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವ ನಿರ್ಧಾರ ಘೋಷಿಸಿದ್ದಾರೆ.

485 ಕೋಟಿ ರೂಪಾಯಿ ವೆಚ್ಚದ ವಿಮಾನ ನಿಲ್ದಾಣ ಯೋಜನೆಯು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಮತ್ತು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಜಂಟಿ ಉದ್ಯಮವಾಗಿದೆ.