Friday, 22nd November 2024

Mannotsava: ಅಕ್ಟೋಬರ್ 26, 27ರಂದು ಮಾನಸಿಕ ಆರೋಗ್ಯ ಹಬ್ಬ ‘ಮನ್ನೋತ್ಸವ’

Mannotsava

ಮಾನಸಿಕ ಆರೋಗ್ಯದ (Mental Health) ಬಗ್ಗೆ ಮಾತನಾಡಲೂ ಹಿಂಜರಿಯುವವರು ಈಗಲೂ ಇದ್ದಾರೆ. ಈ ನಡುವೆ ಈ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎನ್ನುವ ಉದ್ದೇಶದಿಂದ ಮೊದಲ ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವವಾದ (National Mental Health Festival) ‘ಮನ್ನೋತ್ಸವ’ವನ್ನು (Mannotsava) ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಮತ್ತು ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರವು (NCBS) ರೋಹಿಣಿ ನಿಲೇಕಣಿ ಫಿಲಾಂತ್ರೊಪಿಸ್ (RNP) ಸಹಭಾಗಿತ್ವದಲ್ಲಿ ಬೆಂಗಳೂರಿನ ನಿಮಾನ್ಸ್ ಕನ್ವೆನ್ಶನ್ ಸೆಂಟರ್ ನಲ್ಲಿ ಅಕ್ಟೋಬರ್ 26 ಮತ್ತು 27ರಂದು ಆಯೋಜಿಸಲಾಗುತ್ತಿದೆ.

ಮನ್ನೋತ್ಸವವು ಮಾನಸಿಕ ಆರೋಗ್ಯ ಉತ್ಸವವಾಗಿದ್ದು ಸಾರ್ವಜನಿಕರು, ಆರೋಗ್ಯ ವೃತ್ತಿಪರರು, ಸಂಶೋಧಕರು, ಕಲಾವಿದರು ಮತ್ತು ಸಮುದಾಯದ ವಕೀಲರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯದ ಕುರಿತಾದ ಹಲವಾರು ವಿಷಯಗಳ ಕುರಿತು ತಿಳಿದುಕೊಳ್ಳಬಹುದು.

ಎರಡು ದಿನಗಳ ಉತ್ಸವದಲ್ಲಿ ಸ್ಪೂರ್ತಿದಾಯಕ ಮಾತುಗಳು, ಕಾರ್ಯಾಗಾರ ಮತ್ತು ಜೀವನದ ಎಲ್ಲಾ ಹಂತಗಳ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ, ಸಮಾಜ, ತಂತ್ರಜ್ಞಾನ, ಲೋಕೋಪಕಾರ, ಬಾಲ್ಯ, ವೃದ್ಧಾಪ್ಯ, ಪಿತೃತ್ವ, ಲಿಂಗ, ಕಲೆ ಮತ್ತು ಹೆಚ್ಚಿನ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿದೆ.

Bone Health: ಮೂಳೆ ಆರೋಗ್ಯಕರವಾಗಿರಬೇಕೆಂದರೆ ಈ ಜೀವಸತ್ವಗಳನ್ನು ತಪ್ಪದೇ ಸೇವಿಸಿ!

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿಕೊಳ್ಳಬಹುದು.

ಇದರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕಾರ್ಯಕ್ರಮದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಸ್ವಯಂ ಪ್ರೇರಣೆಯಿಂದ ಹೆಸರು ನೋಂದಾಯಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ಪುಟ https://lu.ma/nationalmentalhealthfestival ಅನ್ನು ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ. .