Wednesday, 18th September 2024

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ

ನವದೆಹಲಿ: ಪೂಜಾ ಖೇಡ್ಕರ್​ ವಿವಾದದ ನಡುವೆ ಕೇಂದ್ರ ಲೋಕಸೇವಾ ಆಯೋಗ(UPSC)ದ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ್ದಾರೆ.
ಅವರ ಅಧಿಕಾರಾವಧಿ 2029ಕ್ಕೆ ಕೊನೆಗೊಳ್ಳಬೇಕಿತ್ತು. ಐದು ವರ್ಷಗಳಿರುವಾಗಲೇ ಅವರು ರಾಜೀನಾಮೆ ನೀಡಿದ್ದು ಅನೇಕ ಊಹಾಪೋಹಗಳಿಗೆ ಕಾರಣ ವಾಗಿದೆ.

ಮನೋಜ್ ಸೋನಿ ರಾಜೀನಾಮೆಗೂ ಪೂಜಾ ಖೇಡ್ಕರ್ ವಿವಾದಕ್ಕೂ ಸಂಬಂಧವಿಲ್ಲ. ಪೂಜಾ ಖೇಡ್ಕರ್ ಅವರ ಘಟನೆ ನಡೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತು ಹೊರಗೆ ತುಂಬಾ ಜನ ಕೇಂದ್ರ ಲೋಕಸೇವಾ ಆಯೋಗದ ಯೂ ಪಿ ಎಸ್​ ಸಿ) ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಎತ್ತಿದ್ದರು.

ಸೋಮವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ವಿರೋಧ ಪಕ್ಷಗಳು ಯೂ ಪಿ ಎಸ್​ ಸಿ ವಿಚಾರ ಎತ್ತಿಕೊಂಡು ಮತ್ತೆ ಸರಕಾರದ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಅದನ್ನು ತಪ್ಪಿಸಿಕೊಳ್ಳಲು ಈ ರೀತಿ ಕ್ರಮಕ್ಕೆ ಸರಕಾರವೇ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಪ್ರಕಾರ ಮನೋಜ್ ಸೋನಿ ರಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋನಿ 2017ರಲ್ಲಿ ಆಯೋಗದ ಸದಸ್ಯರಾಗಿ ಸೇರಿದ್ದರು. ಮೇ 16, 2023ರಂದು ಅವರನ್ನು ಯುಪಿಎಸ್​ಸಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಅವರು ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ನೂತನ ಅಧ್ಯಕ್ಷರ ಹೆಸರನ್ನು ಸರ್ಕಾರ ಪ್ರಕಟಿಸಿಲ್ಲ.

ಯುಪಿಎಸ್​ಸಿ ಸೇರುವ ಮೊದಲು ಅವರು ಎರಡು ವಿಶ್ವವಿದ್ಯಾಲಯಗಳ ಕುಲಪತಿಯೂ ಆಗಿದ್ದರು.

ಕೇಂದ್ರ ಸರ್ಕಾರದ ಪರವಾಗಿ ನಾಗರಿಕ ಸೇವಾ ಪರೀಕ್ಷೆಗಳು ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸುವಲ್ಲಿ ಕೇಂದ್ರ ಲೋಕಸೇವಾ ಆಯೋಗವು ಪ್ರಮುಖ ಪಾತ್ರವಹಿಸುತ್ತದೆ. ಈ ಸಂಸ್ಥೆಯು ಸಾಮಾನ್ಯವಾಗಿ ಐಎಎಸ್​, ಐಎಫ್​ಎಸ್​, ಐಪಿಎಸ್ ಮತ್ತು ಕೇಂದ್ರ ಸೇವೆಗಳಲ್ಲಿ ಪ್ರತಿಷ್ಠಿತ ಹುದ್ದೆಗಳಿಗೆ ಅಭ್ಯರ್ಥಿ ಗಳನ್ನು ಶಿಫಾರಸು ಮಾಡುತ್ತದೆ.

ಯುಪಿಎಸ್​ಸಿ ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ ವಿರುದ್ಧದ ಆರೋಪದ ನಂತರ ಯುಪಿಎಸ್​ಸಿ ಸುದ್ದಿಯಲ್ಲಿದೆ. ಅವರು ನಾಗರಿಕ ಸೇವೆಗಳ ಪ್ರವೇಶ ಪಡೆಯಲು ತಮ್ಮ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಮನೋಜ್ ಸೋನಿ ಹಾಗೂ ಈ ಪ್ರಕರಣಕ್ಕೆ ಸಂಬಂಧವಿಲ್ಲ ಎನ್ನಲಾಗುತ್ತಿದೆ. ಸಧ್ಯಕ್ಕೆ ಪೂಜಾ ತರಬೇತಿಯನ್ನು ತಡೆಹಿಡಿಯಲಾಗಿದೆ.

Leave a Reply

Your email address will not be published. Required fields are marked *