Saturday, 14th December 2024

ಮಾಜಿ ಕೇಂದ್ರ ಸಚಿವ ಮನ್ಸುಖ್ ಭಾಯ್ ವಾಸವ ಬಿಜೆಪಿಗೆ ರಾಜೀನಾಮೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾಜಿ ಕೇಂದ್ರ ಸಚಿವ ಮನ್ಸುಖ್ ಭಾಯ್ ವಾಸವ ಅವರು ಬಿಜೆಪಿಗೆ ರಾಜೀ ನಾಮೆ ನೀಡಿದ್ದಾರೆ. ಗುಜರಾತ್‌ನ ಭರೂಚ್ ಲೋಕಸಭೆ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು ಸಂಸತ್‌ನ ಬಜೆಟ್ ಅಧಿವೇಶನದ ವೇಳೆ ಲೋಕಸಭೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ನಾನು ಪಕ್ಷದ ಮೌಲ್ಯಗಳ ಕಾಳಜಿ ವಹಿಸಿದ್ದೆ. ಆದರೆ ಎಷ್ಟಾದರೂ ನಾನು ಸಾಮಾನ್ಯ ಮನುಷ್ಯ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪುಗಳನ್ನು ಮಾಡುತ್ತಾನೆ. ನನ್ನ ತಪ್ಪುಗಳು ಪಕ್ಷಕ್ಕೆ ಹಾನಿಯುಂಟು ಮಾಡಬಾರದು ಎಂದು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಾನು ಸ್ಪೀಕರ್ ರನ್ನು ಖುದ್ದು ಭೇಟಿ ಮಾಡಲಿದ್ದೇನೆ. ಲೋಕಸಭೆ ಸದಸ್ಯತ್ವಕ್ಕೆ ನನ್ನ ರಾಜೀನಾಮೆ ಹಸ್ತಾಂತರಿಸಲಿದ್ದೇನೆ. ಈ ನನ್ನ ನಿರ್ಧಾರವನ್ನು ದಯಮಾಡಿ ಕೇಂದ್ರದ ನಾಯಕತ್ವಕ್ಕೆ ತಿಳಿಸಿ’ ಎಂದು ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯ ಚಟುವಟಿಕೆಗಳನ್ನು ಬಗ್ಗೆ ವಾಸವ ಅವರು ಅನೇಕ ದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಸಮಸ್ಯೆ ಗಳ ಬಗ್ಗೆ ಪಕ್ಷ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಟು ಟೀಕೆಗಳನ್ನು ಮಾಡಿದ್ದರು.