Thursday, 21st November 2024

ಮುಂದಿನ ವರ್ಷ ಮಾರ್ಚ್‌ವರೆಗೂ ಈರುಳ್ಳಿ ರಫ್ತಿಗೆ ನಿಷೇಧ

ವದೆಹಲಿ: ಪ್ರತಿ ಕೆಜಿ ಈರುಳ್ಳಿಗೆ 70 ರೂಪಾಯಿ ಬೆಲೆ ದಾಟಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಮುಂದಿನ ವರ್ಷ ಮಾರ್ಚ್‌ವರೆಗೂ ನಿಷೇಧಿಸಿದೆ.

ದೇಶದಲ್ಲಿ ಈರುಳ್ಳಿಯ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 70 ರೂ. ದಾಟಿದ ಕಾರಣ ದೇಶಿಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕೇಂದ್ರವು ಶುಕ್ರವಾರ ರಫ್ತಿಗೆ 1 ವರ್ಷ ನಿಷೇಧ ಹೇರಿದೆ. ಡಿಸೆಂಬರ್‌ನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಬಹುದು. ನವೆಂಬರ್ ಮತ್ತು ಡಿಸೆಂಬರ್ ಎರಡರಲ್ಲೂ ಹಣದುಬ್ಬರ ಏರಿಕೆಯಾಗಬಹುದು ಎಂದು ಎಚ್ಚರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ, ದೇಶೀಯ ಮಾರುಕಟ್ಟೆಗಳಲ್ಲಿ ಈರುಳ್ಳಿಯ ಬೆಲೆಯನ್ನು ಮಾರುಕಟ್ಟೆಯಲ್ಲಿ ನಿಯಂತ್ರಿಸಲು ಕೇಂದ್ರವು ಪ್ರತಿ ಮೆಟ್ರಿಕ್ ಟನ್‌ಗೆ 800 ರೂ.ಗಳ ಕನಿಷ್ಠ ರಫ್ತು ಬೆಲೆಯನ್ನು (MEP) ವಿಧಿಸಿತ್ತು.

ರೈತರು ಪ್ರೊತ್ಸಾಹಧನದ ಲಾಭ ಪಡೆಯಲು ಇತರೆ ಬೆಳೆಗಳನ್ನು ಆಯ್ದುಕೊಂಡಿದ್ದರಿಂದ ಖಾರಿಫ್ ಹಂಗಾಮಿನಲ್ಲಿ ಟೊಮೇಟೊ ಕೃಷಿ ಕಡಿಮೆಯಾಗಿತ್ತು. ಇದು ಆಗಸ್ಟ್ 2023 ರವರೆಗೆ ಟೊಮೇಟೊ ಬೆಲೆಯಲ್ಲಿ ಏರಿಕೆಗೆ ಕಾರಣವಾಯಿತು, ಇದು ಹಣದುಬ್ಬರವನ್ನು ಹೆಚ್ಚಿಸಿತು.

ಕನಿಷ್ಠ ರಫ್ತು ಬೆಲೆ ಏರಿಕೆಯ ನಂತರವೂ ತಿಂಗಳಿಗೆ 1 ಲಕ್ಷ ಟನ್‌ಗಳಿಗಿಂತ ಹೆಚ್ಚು ಈರುಳ್ಳಿ ರಫ್ತು ಮಾಡಲ್ಪಟ್ಟ ಕಾರಣ ನಿಷೇಧವನ್ನು ಹೇರಲಾಯಿತು.

ರಾಷ್ಟ್ರ ರಾಜಧಾನಿಯಲ್ಲಿ ಸ್ಥಳೀಯ ಮಾರಾಟಗಾರರು ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ 70-80 ರೂ.ಗೆ ಮಾರಾಟ ಮಾಡುತ್ತಿದ್ದಾರೆ.