ಮದುವೆ (Marriage Story) ಎಂಬುವುದು ಒಂದು ಸಂಭ್ರಮದ ಕ್ಷಣ. ಈ ದಿನಕ್ಕಾಗಿ ಅನೇಕ ತಯಾರಿಗಳನ್ನು ಮಾಡುತ್ತಾರೆ ಮತ್ತು ಅದನ್ನು ತಮ್ಮ ಜೀವನದ ಸ್ಮರಣೀಯ ಕ್ಷಣವನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ವಿವಾಹವು ದೀರ್ಘಕಾಲದವರೆಗೆ ಇರುವಂತಹ ಸಂಬಂಧವಾಗಿರುವ ಕಾರಣ ಇದರಲ್ಲಿ ಕೆಲವೊಮ್ಮೆ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆದರೆ ವಿಭಿನ್ನ ಸ್ಥಳಗಳಲ್ಲಿ ಇದರ ಬಗ್ಗೆ ವಿಭಿನ್ನ ಸಂಪ್ರದಾಯಗಳು ಮತ್ತು ನಂಬಿಕೆಗಳಿವೆ. ಪ್ರಪಂಚದಾದ್ಯಂತ ಮದುವೆಗೆ, ವಧುವಿಗೆ ಸಂಬಂಧಿಸಿದ ಅನೇಕ ಪದ್ಧತಿಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ಉಗುಳುವ ಮೂಲಕ ಮಗಳನ್ನು ಆಶೀರ್ವದಿಸುವ ಕ್ರಮ
ಕೀನ್ಯಾದಲ್ಲಿ ಮಾಸಾಯಿ ವಿವಾಹಗಳಲ್ಲಿ ಬಹಳ ವಿಚಿತ್ರವಾದ ಸಂಪ್ರದಾಯವು ಪ್ರಚಲಿತದಲ್ಲಿದೆ. ಇಲ್ಲಿ, ವಧು ಗಂಡನೊಂದಿಗೆ ತನ್ನ ಗ್ರಾಮವನ್ನು ತೊರೆಯುವ ಮೊದಲು, ಅಂದರೆ ಮದುವೆಯ ನಂತರ ವಿದಾಯ ಹೇಳುವ ಮೊದಲು, ವಧುವಿನ ತಂದೆ ತನ್ನ ಮಗಳನ್ನು ಉಗುಳುವ ಮೂಲಕ ಆಶೀರ್ವದಿಸುತ್ತಾನೆ. ಇಲ್ಲಿ ತಂದೆ ಮಗಳ ತಲೆ ಮತ್ತು ಎದೆಯ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾನಂತೆ.
ಸ್ನಾನಗೃಹದ ನಿಷೇಧ
ಇಂಡೋನೇಷ್ಯಾದಲ್ಲಿ ಮದುವೆಗೆ ಸಂಬಂಧಿಸಿದ ಒಂದು ವಿಚಿತ್ರ ಸಂಪ್ರದಾಯವಿದೆ. ಇಲ್ಲಿ ಮದುವೆಯ ನಂತರ, ದಂಪತಿ ಮೂರು ಹಗಲು ಮತ್ತು ರಾತ್ರಿ ಮನೆಯಲ್ಲಿ ಇರಬೇಕಾಗುತ್ತದೆ. ಈ ಸಮಯದಲ್ಲಿ, ದಂಪತಿ ವಾಶ್‌ರೂಮ್ ಬಳಸಲು ಅನುಮತಿಸಲಾಗುವುದಿಲ್ಲ. ಇದನ್ನು ಮಾಡುವುದರಿಂದ, ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಮತ್ತು ದಂಪತಿ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ನಂಬಲಾಗಿದೆ.
ಮದುವೆ ಮೊದಲ ರಾತ್ರಿ ಪದ್ಧತಿ
ಮದುವೆಯ ನಂತರದ ಮೊದಲ ರಾತ್ರಿ ದಂಪತಿಗೆ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಇದು ಅವರ ವೈವಾಹಿಕ ಜೀವನದ ಪ್ರಾರಂಭ ಮಾತ್ರವಲ್ಲ, ಪರಸ್ಪರ ಸ್ವಲ್ಪ ಸಮಯ ಕಳೆಯುವ ಅವಕಾಶವೂ ಆಗಿದೆ. ಆದರೆ ಆಫ್ರಿಕಾದ ಕೆಲವು ಹಳ್ಳಿಗಳಲ್ಲಿ, ಮದುವೆಯ ಮೊದಲ ರಾತ್ರಿ ನವವಿವಾಹಿತ ದಂಪತಿಯೊಂದಿಗೆ ವಯಸ್ಸಾದ ಮಹಿಳೆ ಅವರ ಕೋಣೆಗೆ ಹೋಗುವುದು ವಾಡಿಕೆ ಇದೆ. ಈ ಮಹಿಳೆ ವಧುವಿಗೆ ಎಲ್ಲವನ್ನೂ ಹೇಗೆ ಮಾಡಬೇಕೆಂದು ಹೇಳುತ್ತಾಳೆ. ಈ ಮಹಿಳೆ ಹಳ್ಳಿಯ ಹಿರಿಯ, ಅಥವಾ ವಧುವಿನ ತಾಯಿಯಾಗಿರಬಹುದು.
ವಧುವಿನ ಅಪಹರಣ
ಈ ಸಂಪ್ರದಾಯವು ಕಿರ್ಗಿಸ್ತಾನ್ ಮತ್ತು ಕಜಕಿಸ್ತಾನದಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ. ಈ ಸಂಪ್ರದಾಯದ ಪ್ರಕಾರ, ಒಬ್ಬ ಪುರುಷನು ತಾನು ಮದುವೆಯಾಗಲು ಬಯಸುವ ಮಹಿಳೆಯನ್ನು ಬಲವಂತದಿಂದ ಅಥವಾ ಒಪ್ಪಿಗೆಯಿಂದ ಅಪಹರಿಸಿ ಕನಿಷ್ಠ 2-3 ದಿನಗಳವರೆಗೆ ತನ್ನ ವಶದಲ್ಲಿ ಇಟ್ಟುಕೊಂಡರೆ, ಹಾಗೂ ಅವಳು ಮದುವೆಗೆ ನೀಡಿದ ಸ್ಕಾರ್ಫ್ ಅನ್ನು ಸ್ವೀಕರಿಸಿದರೆ ಅವಳನ್ನು ಆತನ ಹೆಂಡತಿ ಎಂದು ಘೋಷಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ:ಪಾಕಿಸ್ತಾನದಲ್ಲಿಯೇ ಉಳಿದ ಭಾರತದ ಈ ರೈಲು; ಅದರ ಹಿಂದಿನ ರೋಚಕ ಕಥೆ ಏನು ಗೊತ್ತಾ?
ಮದುವೆಗೆ ಒಂದು ತಿಂಗಳ ಮೊದಲು ಅಳುವ ವಧು
ಚೀನಾದ ತುಜಿಯಾನ್ ಜನಾಂಗೀಯ ಅಲ್ಪಸಂಖ್ಯಾತರಲ್ಲಿ ಈ ವಿಚಿತ್ರ ಸಂಪ್ರದಾಯವಾಗಿದೆ. ವಧು ತನ್ನ ಮದುವೆಗೆ ಒಂದು ತಿಂಗಳ ಮೊದಲು ಪ್ರತಿದಿನ ಒಂದು ಗಂಟೆ ಅಳಬೇಕಾಗುತ್ತದೆ. ವಧುವಿನ ಕುಟುಂಬದ ಅನೇಕ ಮಹಿಳೆಯರನ್ನು ಸಹ ಇದಕ್ಕಾಗಿ ಪ್ರೋತ್ಸಾಹಿಸಲಾಗುತ್ತದೆ. ವಾಸ್ತವವಾಗಿ, ಇದನ್ನು ಸಂತೋಷದ ಸಂಕೇತ ಎಂದು ಪರಿಗಣಿಸಲಾಗಿರುವುದರಿಂದ ಇದನ್ನು ಮಾಡಲಾಗುತ್ತದೆ.