Sunday, 15th December 2024

ಮದುವೆ ಸೀರೆಯಲ್ಲಿ ವಧು ಪ್ರ್ಯಾಕ್ಟಿಕಲ್‌ ಪರೀಕ್ಷೆಗೆ ಹಾಜರು

ತಿರುವನಂತಪುರಂ: ಮದುವೆ ಸೀರೆಯಲ್ಲಿ ವಧು ಪ್ರ್ಯಾಕ್ಟಿಕಲ್‌ ಪರೀಕ್ಷೆಗೆ ಹಾಜರಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಧುವನ್ನು ಲಕ್ಷ್ಮಿ ಅನಿಲ್ ಎಂದು ಗುರುತಿಸಲಾಗಿದ್ದು, ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ವಿದ್ಯಾರ್ಥಿನಿಯಾಗಿದ್ದಾಳೆ.

ಮದುವೆ ಸೀರೆಯಲ್ಲೇ ಲ್ಯಾಬ್ ಕೋಟ್ ಹಾಗೂ ಸ್ಟೆತಸ್ಕೋಪ್ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಳದಿ ಸೀರೆಯನ್ನುಟ್ಟು, ಮದುವೆಯ ಆಭರಣ ಹಾಗೂ ಮೇಕಪ್ ಹಾಕಿ ಪರೀಕ್ಷಾ ಹಾಲ್‍ಗೆ ಪ್ರವೇಶಿಸಿದ್ದಾಳೆ. ನಂತರ ಅವಳು ಸ್ನೇಹಿತರನ್ನು ಕೈಬೀಸಿದ್ದಾಳೆ. ಈ ವೀಡಿಯೋಕ್ಕೆ ಆಕೆ ಪರೀಕ್ಷೆ ಹಾಗೂ ಮದುವೆ ಒಂದೇ ದಿನದಲ್ಲಿ ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ. ಈ ಬಗ್ಗೆ ಆಕೆ ಮದುವೆ ಹಾಗೂ ಪರೀಕ್ಷೆ ಒಂದೇ ದಿನದಲ್ಲಿ ಬರುತ್ತದೆ ಎಂದು ಸ್ವಲ್ಪ ದಿನದ ಹಿಂದೆ ತಿಳಿಯಿತು.

ಇದರಿಂದಾಗಿ ನಾನು ಪರೀಕ್ಷೆ ಬರೆಯಲು ನಿರ್ಧರಿಸಿದೆ ಎಂದು ತಿಳಿಸಿದರು.