ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲೆ ವೃತ್ತಿ ನಡೆಸುತ್ತಿರುವ ನೂತನ್ ತಿವಾರಿ (50) ಈ ಭಾಗದ ಬಿಜೆಪಿ ನಾಯಕಿಯೂ ಆಗಿದ್ದಾರೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ-1 ಆಗಿ ಗೊಡ್ಡಾ ಜಿಲ್ಲೆಯಲ್ಲಿ ಸಿಂಗ್ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ದುಮ್ಕಾ ಜಿಲ್ಲೆಯ ಬಾಸುಕಿನಾಥ್ ದೇವಾಲಯದಲ್ಲಿ ವಿವಾಹವಾಗಿದೆ.
“2006ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಸಿಂಗ್ ಅವರು ಹಿಂದಿನ ಪತ್ನಿಯಲ್ಲಿ ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಕೆಲ ವರ್ಷಗಳ ಹಿಂದೆ ನೂತನ್ ತಮ್ಮ ಪತಿಯನ್ನು ಅಪಘಾತ ದಲ್ಲಿ ಕಳೆದುಕೊಂಡಿದ್ದರು. ಮಕ್ಕಳು ಹಾಗೂ ಕುಟುಂಬದವರು ಒಪ್ಪಿಗೆ ನೀಡಿದ ಬಳಿಕ ಇಬ್ಬರೂ ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಇದು ಅಂತರ್ಜಾತೀಯ ಹಾಗೂ ವಿಧವೆ ವಕೀಲೆಯ ವಿವಾಹವಾಗಿದ್ದು, ಬೌದ್ಧಿಕ ಹಾಗೂ ಕಾನೂನು ವಲಯದಲ್ಲಿ ಸಿಂಗ್ ಅವರ ವಿವಾಹಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.