Saturday, 14th December 2024

ಮೇರಿ ಕೋಮ್​ ಪತಿ ಸ್ವತಂತ್ರ ಅಭ್ಯರ್ಥಿ

ಮಣಿಪುರ: ಒಲಿಂಪಿಕ್ಸ್​ ಪದಕ ವಿಜೇತೆ ಮೇರಿ ಕೋಮ್​ ಪತಿ ಕೆ.ಒಂಕೋ ಲರ್​​ ಮಣಿಪುರದ ಸೈಕೋಟ್​ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಒಂಕೋಲರ್​ ತಮ್ಮ ಚುನಾವಣಾ ಚಿಹ್ನೆಯಾಗಿ ಟಾರ್ಚ್​ನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಮೇರಿ ಕೋಮ್​ರ ಪತಿಯ ಈ ಪ್ರಯತ್ನಕ್ಕೆ ಗ್ರಾಮಸ್ಥರು ಅಭೂತಪೂರ್ವ ಬೆಂಬಲ ಸೂಚಿಸುತ್ತಿದ್ದಾರೆ. ಸಿಯಾಲ್​ಕೋಟದಿಂದ ಸಮುಲ್ಲಮನ್​ ಗ್ರಾಮಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ಒಂಕೋಲರ್​ರ ಬೆಂಬಲ ಸೂಚಿಸುವ ಸಾಕಷ್ಟು ಬ್ಯಾನರ್​ಗಳನ್ನು ಅಂಟಿಸಲಾಗಿದೆ.

ನಮ್ಮ ಗ್ರಾಮವು ಮೇರಿ ಕೋಮ್​ ಗ್ರಾಮ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ನಮ್ಮ ಗ್ರಾಮಕ್ಕೆ ಅಭಿವೃದ್ಧಿಯ ಅವಶ್ಯಕತೆ ಇದೆ. ಮೇರಿ ಕೋಮ್​ ಸಂಸದರಾದ ಬಳಿಕ ನಮ್ಮ ಗ್ರಾಮದಲ್ಲಿ ಕೆಲವು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ. ಇದಕ್ಕಾಗಿಯೇ ನಾವು ಒಂಕೋಲರ್​ರನ್ನು ವಿಧಾನ ಸಭಾ ಚುನಾವಣೆಯ ಕಣಕ್ಕಿಳಿಸುತ್ತಿದ್ದೇವೆ ಎಂದು ಸ್ಥಳೀಯ ಅಸಾಂಗ್​ ಲಾಂಗ್​ ಎಂಬವರು ಹೇಳಿದರು.

ಮೇರಿಕೋಮ್​ ಪತಿ ಒಂಕೋಲರ್ ಮಾತನಾಡಿ​, ನಾವು ಯಾವುದೇ ರೀತಿಯಲ್ಲಾದರೂ ಜನರಿಗಾಗಿ ಕೆಲಸ ಮಾಡಬೇಕೆಂದು ಬಯಸುತ್ತೇನೆ. ಈ ಬಾರಿ ಕೂಡ ನನಗೆ ಜನರೇ ಒತ್ತಾಯ ಮಾಡಿ ಕಣಕ್ಕಿಳಿಸಿದ್ದಾರೆ. ನಾನು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್​ ಸಿಗಬಹುದಾ ಎಂದು ಯತ್ನಿಸಿದೆ. ಆದರೆ ಟಿಕೆಟ್​ ನೀಡಲಿಲ್ಲ. ಹೀಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿ ದಿದ್ದೇನೆ ಎಂದು ಹೇಳಿದರು.

ಮೇರಿಕೋಮ್​ ಕೂಡ ಸಂಸದೆಯಾಗಿರುವುದರಿಂದ ಅವರಿಗೆ ನನಗೆ ನೇರವಾಗಿ ಬೆಂಬಲ ನೀಡಲು ಸಾಧ್ಯವಿಲ್ಲ. ಆದರೆ ಪರೋಕ್ಷ ಬೆಂಬಲ ನನಗಿದೆ. ನನ್ನ ಪ್ರತಿಯೊಂದು ಹೆಜ್ಜೆಗೂ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.