Sunday, 15th December 2024

ಇಸ್ಲಾಮೀ ವಿದ್ವಾಂಸ ಮೌಲಾನಾ ಮುಹಮ್ಮದ್ ಯೂಸುಫ್ ಇಸ್ಲಾಹಿ ನಿಧನ

#maulana muhammad yusuf islahi

ನವದೆಹಲಿ: ಇಸ್ಲಾಮೀ ವಿದ್ವಾಂಸ, ಲೇಖಕ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಹಿರಿಯ ನಾಯಕ ಮೌಲಾನಾ ಮುಹಮ್ಮದ್ ಯೂಸುಫ್ ಇಸ್ಲಾಹಿ (89 ವರ್ಷ)ಮಂಗಳವಾರ ನಿಧನರಾಗಿದ್ದಾರೆ.

ಉತ್ತರ ಪ್ರದೇಶದ ಮೌಲಾನಾ ಯೂಸುಫ್ ಇಸ್ಲಾಹಿಯವರು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ, ಉಪನ್ಯಾಸಕರಾಗಿ, ಹಲವಾರು ಮಹತ್ವದ ಇಸ್ಲಾಮಿ ಪುಸ್ತಕಗಳ ಲೇಖಕರಾಗಿ, ಧಾರ್ಮಿಕ ಆಂದೋಲನದ ನಾಯಕರಾಗಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದರು.

ಅದಾಬೆ ಝಿಂದಗಿ (ಇಸ್ಲಾಮಿ ಶಿಷ್ಟಾಚಾರಗಳು) ಹಾಗೂ ಕುರ್ ಆನಿ ತಾಲೀಮಾತ್ (ಕುರ್ ಆನ್ ನ ಆಯ್ದ ಸೂಕ್ತಗಳು) ಕೃತಿಗಳು ಲಕ್ಷಾಂತರ ಪ್ರತಿಗಳ ಮುದ್ರಣ ಕಂಡು ದೇಶ ವಿದೇಶಗಳಲ್ಲಿ ಜನರನ್ನು ತಲುಪಿವೆ.

ಮೌಲಾನಾ ಅವರು ಜಮೀಯ್ಯತು ಸಾಲಿಹಾತ್ ಮಹಿಳೆಯರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಾಗಿ, ಉರ್ದು ನಿಯತಕಾಲಿಕ ಝಿಕ್ರದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.